ADVERTISEMENT

ಡುರಾಂಡ್ ಕಪ್ | ಫೋಟೊಗೆ ಅಡ್ಡ ಬರದಂತೆ ಚೆಟ್ರಿಯನ್ನು ತಳ್ಳಿದ ಮಣಿಪುರ ರಾಜ್ಯಪಾಲ

ಬೆಂಗಳೂರು ಫುಟ್‌ಬಾಲ್ ಕ್ಲಬ್‌ ತಂಡದ ನಾಯಕ ಸುನಿಲ್‌ ಚೆಟ್ರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2022, 7:33 IST
Last Updated 19 ಸೆಪ್ಟೆಂಬರ್ 2022, 7:33 IST
   

ಕೋಲ್ಕತ್ತ: ಡುರಾಂಡ್ ಕಪ್‌ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜೇತ ತಂಡದ ನಾಯಕ ಸುನಿಲ್‌ ಚೆಟ್ರಿ ಅವರನ್ನು ಮಣಿಪುರ ಹಾಗೂ ಪಶ್ಚಿಮ ಬಂಗಾಳ ರಾಜ್ಯಪಾಲ ಲಾ ಗಣೇಶನ್‌ ಅವರು ಪಕ್ಕಕ್ಕೆ ತಳ್ಳಿರುವ ವಿಡಿಯೊವೊಂದು ವೈರಲ್‌ ಆಗಿದೆ.

38 ವರ್ಷದ ಚೆಟ್ರಿ ಮುಂದಾಳತ್ವದಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಇದೇ ಮೊದಲ ಬಾರಿಗೆಡುರಾಂಡ್‌ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿಚಾಂಪಿಯನ್ ಪಟ್ಟ ಅಲಂಕರಿಸಿದೆ.ಕೋಲ್ಕತ್ತದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಬಿಎಫ್‌ಸಿ ತಂಡವು ಮುಂಬೈ ಸಿಟಿ ಎಫ್‌ಸಿ ವಿರುದ್ಧ 2-1ರ ಅಂತರದ ಭರ್ಜರಿ ಗೆಲುವು ದಾಖಲಿಸಿ ಈ ಸಾಧನೆ ಮಾಡಿದೆ.

ಪಂದ್ಯದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. ಈ ವೇಳೆಗಣೇಶನ್‌ ಅವರು ಕ್ಯಾಮರಾಗಳಿಗೆ ಅಡ್ಡಿ ಬರದಂತೆ ಚೆಟ್ರಿ ಅವರನ್ನು ಪಕ್ಕಕ್ಕೆ ಸರಿಸಿದ್ದರು. ಈ ವಿಡಿಯೊಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳು ರಾಜ್ಯಪಾಲರ ನಡೆಯನ್ನು ಟೀಕಿಸಿದ್ದಾರೆ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.

ADVERTISEMENT

'ಈ ಕಾರಣಕ್ಕೆ ನಾವು ಭಾರತದ ರಾಜಕಾರಣಿಗಳಿಗೆ ತಲೆಯಲ್ಲಿ ಬುದ್ದಿ ಇಲ್ಲ ಎನ್ನುವುದು. ಅವರು ಕೇವಲ ಖ್ಯಾತಿ ಗಳಿಸುವ ಸಲುವಾಗಿ ಕ್ಯಾಮರಾಗೆ ಮುಖ ತೋರಿಸಲು ಬರುತ್ತಾರೆ. ಈ ವ್ಯಕ್ತಿ (ಲಾ ಗಣೇಶನ್‌) ತಾವೇ ಪ್ರಶಸ್ತಿ ಗೆದ್ದ ರೀತಿಯಲ್ಲಿ ಪ್ರಶಸ್ತಿ ಹಿಡಿದುಕೊಳ್ಳಲು ಸುನಿಲ್ ಚೆಟ್ರಿ ಅವರನ್ನು ಪಕ್ಕಕ್ಕೆ ನಿಲ್ಲಲು ಹೇಳಿದ್ದಾರೆ' ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಗಿ ಟೀಕಿಸಿದ್ದಾರೆ.

ಗಣೇಶನ್‌ ಅವರು ಸುನಿಲ್‌ ಚೆಟ್ರಿ ಅವರಲ್ಲಿ ಕ್ಷಮೆ ಕೇಳಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಮತ್ತಷ್ಟು ಟ್ವೀಟ್‌ಗಳು ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.