ADVERTISEMENT

ಝೈಬ್‌ ಹ್ಯಾಟ್ರಿಕ್‌; ಅಲ್‌ ಫತೇ ಎಫ್‌ಸಿಗೆ ಜಯ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 14:13 IST
Last Updated 8 ಜನವರಿ 2026, 14:13 IST
   

ಪ್ರಜಾವಾಣಿ ವಾರ್ತೆ

ಬೆಂಗಳೂರು: ಝೈಬ್‌ ಶೆರೀಫ್‌ (33ನೇ, 45ನೇ ಹಾಗೂ 56ನೇ ನಿ.) ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಅಲ್‌ ಫತೇ ಎಫ್‌ಸಿ ತಂಡವು ಬಿಡಿಎಫ್‌ಎ ‘ಬಿ’ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಬುಧವಾರ 5–2ರಿಂದ ಎಂಡಿ ಸ್ಪೋರ್ಟಿಂಗ್‌ ಎಫ್‌ಸಿ ತಂಡದ ವಿರುದ್ಧ ಗೆಲುವು ಸಾಧಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಪೋರ್ಟಿಂಗ್‌ ತಂಡದ ಸಿರೊಯ್‌ ಖ್ವೈರಕ್‌ಪಮ್‌ 9ನೇ ನಿಮಿಷದಲ್ಲಿ ಗೋಲು ಗಳಿಸಿ, ಆರಂಭಿಕ ಮುನ್ನಡೆ ತಂದುಕೊಟ್ಟರು. ನಂತರ ಪುಟಿದೆದ್ದ ಅಲ್‌ ಫತೇ ತಂಡದ ಆಟಗಾರರು ನಿರಂತರವಾಗಿ ಗೋಲು ಗಳಿಸಿದರು. ಝೈಬ್‌ ಹ್ಯಾಟ್ರಿಕ್‌ ಸಾಧಿಸಿದರೆ, ಹರ್ಷ ಸುಹಾಂದ (19ನೇ ನಿ.) ಹಾಗೂ ಆದಿತ್ಯ ಅಶೋಕ್‌ (55ನೇ ನಿ.) ಅವರು ತಲಾ ಒಂದು ಗೋಲು ಗಳಿಸಿದರು. ಸ್ಪೋರ್ಟಿಂಗ್‌ ತಂಡದ ಜುಗೇಶ್‌ ಸಿಂಗ್‌ 80+1ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲನ್ನಾಗಿ ಪರಿವರ್ತಿಸಿ, ಸೋಲಿನ ಅಂತರ ತಗ್ಗಿಸಿದರು.

ADVERTISEMENT

ದಿನದ ಇನ್ನೊಂದು ಪಂದ್ಯದಲ್ಲಿ ಇನ್‌ಫೈನೈಟ್‌ ಬೆಳಗಾವಿ ಎಫ್‌ಸಿ ಹಾಗೂ ಜುನೊ ಎಫ್‌ಸಿ ತಂಡಗಳು 2–2 ಡ್ರಾ ಸಾಧಿಸಿದವು. ಮೊದಲಾರ್ಧದಲ್ಲಿ 0–2ರಿಂದ ಹಿನ್ನಡೆಯಲ್ಲಿದ್ದ ಜುನೊ ತಂಡವು ಶ್ರೀಕಾಂತ್‌ ಸಿಂಗ್‌ (52ನೇ ನಿ.) ಹಾಗೂ ಚಕ್ರೇಶ್‌ ಆಚಾರ್ಯ (80+3ನೇ ನಿ.) ಅವರ ಗೋಲಿನ ನೆರವಿನಿಂದ ಡ್ರಾ ಸಾಧಿಸುವಲ್ಲಿ ಯಶಸ್ವಿ ಆಯಿತು.

ಮತ್ತೊಂದು ಪಂದ್ಯದಲ್ಲಿ, ಅತಿಂಗ್‌ದಂಗ್‌ ಸಂಗ್ಟಾ (69ನೇ ನಿ.) ಅವರು ಗಳಿಸಿದ ಗೋಲಿನ ನೆರವಿನಿಂದ ವೆಹಿಕಲ್ಸ್‌ ಎಫ್‌ ತಂಡವು 1–0ಯಿಂದ ಎಡಿಇ ಎಫ್‌ಸಿ ತಂಡವನ್ನು ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.