ADVERTISEMENT

ಭಾರತದಲ್ಲಿ 2036ರ ಒಲಿಂಪಿಕ್ಸ್?: ಶೀಘ್ರದಲ್ಲಿ ನಿರ್ಧಾರ ಎಂದ ಕ್ರಿಸ್ಟಿ ಕೊವೆಂಟ್ರಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 13:14 IST
Last Updated 21 ಮಾರ್ಚ್ 2025, 13:14 IST
<div class="paragraphs"><p>ಕ್ರಿಸ್ಟಿ ಕೊವೆಂಟ್ರಿ</p></div>

ಕ್ರಿಸ್ಟಿ ಕೊವೆಂಟ್ರಿ

   

ರಾಯಿಟರ್ಸ್ ಚಿತ್ರ

ಕೊಸ್ಟಾ ನವಾರಿನೊ: ‘ಭಾರತದಲ್ಲಿ 2036ರ ಒಲಿಂಪಿಕ್ಸ್ ಆಯೋಜನೆ ಒಳಗೊಂಡಂತೆ ಭವಿಷ್ಯದ ಯೋಜನೆಗಳ ಕುರಿತ ತಮ್ಮ ಆಲೋಚನೆಯನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು’ ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ನೂತನ ಅಧ್ಯಕ್ಷೆ ಕ್ರಿಸ್ಟಿ ಕೊವೆಂಟ್ರಿ ತಿಳಿಸಿದ್ದಾರೆ.

ADVERTISEMENT

ಒಲಿಂಪಿಕ್‌ ಸಂಸ್ಥೆಯ ನೇತೃತ್ವ ವಹಿಸಿದ ಮೊದಲ ಮಹಿಳೆ ಹಾಗೂ ದಕ್ಷಿಣ ಆಫ್ರಿಕಾದ ಪ್ರಥಮ ಪ್ರಜೆ ಎಂದೆನಿಸಿರುವ ಕೊವೆಂಟ್ರಿ, ‘ಕೆಲವೊಂದು ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಭವಿಷ್ಯದಲ್ಲಿ ಯಾವ ರಾಷ್ಟ್ರದಲ್ಲಿ ಒಲಿಂಪಿಕ್ಸ್ ಆಯೋಜನೆಗೊಳ್ಳಲಿದೆ ಎಂಬ ಚರ್ಚೆಯಲ್ಲಿ ಸದಸ್ಯರ ಅಭಿಪ್ರಾಯ ಮುಖ್ಯ. ನನ್ನಲ್ಲೂ ಹಲವು ಆಲೋಚನೆಗಳಿದ್ದು, ಬಹುಶಃ ಮುಂದಿನ ದಿನಗಳಲ್ಲಿ ಅದನ್ನು ಹಂಚಿಕೊಳ್ಳುತ್ತೇನೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಜೂನ್ 23ರಂದು ಒಲಿಂಪಿಕ್ ದಿನ ಆಚರಿಸಲಾಗುತ್ತಿದೆ. ಅಂದು ಐಒಸಿ ಅಧ್ಯಕ್ಷೆಯಾಗಿ ಕೊವೆಂಟ್ರಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 2036ರ ಒಲಿಂಪಿಕ್ಸ್ ಆಯೋಜನೆಯ ಅವಕಾಶ ಕೋರಿ ಭಾರತೀಯ ಒಲಿಂಪಿಕ್ ಒಕ್ಕೂಟವು ಪ್ರಸ್ತಾವ ಸಲ್ಲಿಸಿದೆ. 

ಭಾರತದೊಂದಿಗೆ ಕತಾರ್ ಮತ್ತು ಸೌದಿ ಅರೇಬಿಯಾ ಸೇರಿದಂತೆ 10 ರಾಷ್ಟ್ರಗಳು ಆಯೋಜನೆಯ ಇಂಗಿತ ವ್ಯಕ್ತಪಡಿಸಿವೆ. ಒಲಿಂಪಿಕ್ಸ್ ಆಯೋಜನೆಯ ಸಾಧಕ ಭಾದಕಗಳ ಕುರಿತು ಭಾರತ ಅಧ್ಯಯನ ನಡೆಸಿದೆ. ಜತೆಗೆ ಆಯೋಜನೆಗೆ ಅವಕಾಶ ಕೋರಿ ಒಕ್ಕೂಟದೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದೆ ಎಂದು ಮೂಲಗಳು ಹೇಳಿವೆ.

2036ರ ಒಲಿಂಪಿಕ್ಸ್‌ ಅನ್ನು ಯಾವ ರಾಷ್ಟ್ರ ಆಯೋಜಿಸಲಿದೆ ಎಂಬುದು 2026ರಲ್ಲೇ ಘೋಷಣೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.