ನವದೆಹಲಿ: ಭಾರತದ ಆರತಿ ಅವರು ಶುಕ್ರವಾರ ಸೌದಿ ಅರೇಬಿಯಾದ ದಮ್ಮಮ್‌ನಲ್ಲಿ ನಡೆಯುತ್ತಿರುವ ಏಷ್ಯನ್ 18 ವರ್ಷದೊಳಗಿನವರ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಬಾಲಕಿಯರ 200 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದರು.
17 ವರ್ಷ ವಯಸ್ಸಿನ ಅಥ್ಲೀಟ್‌ಗೆ ಇದು ಈ ಕೂಟದ ಎರಡನೇ ಪದಕವಾಗಿದೆ. ಬುಧವಾರ ಅವರು 100 ಮೀಟರ್ ಓಟದಲ್ಲೂ ಕಂಚಿನ ಪದಕ ಗೆದ್ದಿದ್ದರು.
200 ಮೀಟರ್ ಫೈನಲ್‌ನಲ್ಲಿ ಆರತಿ 24.31 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಯುಎಇಯ ಮರಿಯಮ್ ಕರೀಂ (23.99 ಸೆ) ಮತ್ತು ಜಪಾನ್‌ನ ಶಿಬಾಟಾ ಮಿಸಾಟೊ (24.16 ಸೆ) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.
ರಿಲೆ ತಂಡಕ್ಕೆ ಬೆಳ್ಳಿ: ಭಾರತದ ಬಾಲಕರ ತಂಡವು ಮೆಡ್ಲೆ ರಿಲೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿತು.
ಚಿರಂತ್ ಪಿ, ಸೈಯದ್ ಸಬೀರ್, ಸಾಕೇತ್ ಮಿಂಜ್ ಮತ್ತು ಕದೀರ್ ಖಾನ್ ಅವರನ್ನು ಒಳಗೊಂಡ ತಂಡವು 1 ನಿಮಿಷ 52.15 ಸೆಕೆಂಡ್‌ಗಳಲ್ಲಿ ಗುರಿ ತಲುಪಿತು. ಇದು ರಾಷ್ಟ್ರೀಯ ಯೂತ್ ದಾಖಲೆಯಾಗಿದೆ.
ಚೀನಾ (1 ನಿ.51.68ಸೆ.) ಮತ್ತು ಸೌದಿ ಅರೇಬಿಯಾ (1ನಿ.52.36ಸೆ) ಕ್ರಮವಾಗಿ ಚಿನ್ನ ಮತ್ತು ಕಂಚು ಗೆದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.