ಬಾರ್ಸಿಲೋನ: ಉತ್ತಮ ಪ್ರದರ್ಶನ ತೋರಿದ ಭಾರತದ ಅದಿತಿ ಅಶೋಕ್ ಇಲ್ಲಿ ನಡೆದ ಎಸ್ಟ್ರೆಲ್ಲಾ ಮೆಡಿಟರೇನಿಯನ್ ಓಪನ್ ಗಾಲ್ಫ್ ಟೂರ್ನಿಯಲ್ಲಿ 8ನೇ ಸ್ಥಾನ ಗಳಿಸಿದರು. ಸತತ ಎರಡನೇ ವರ್ಷ ಅವರು ಅಗ್ರ 10ರೊಳಗೆ ಸ್ಥಾನ ಪಡೆದರು.
ಬೆಂಗಳೂರಿನ21 ವರ್ಷದ ಅದಿತಿ ಒಟ್ಟು 284 ಪಾಯಿಂಟ್ಸ್ ಗಳಿಸಿದರು. ತ್ವೇಷಾ ಮಲಿಕ್ 35ನೇ ಸ್ಥಾನ ಗಳಿಸಿದರೆ, ದೀಕ್ಷಾ ದಾಗರ್ 49ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಸ್ಪೇನ್‌ನ ಕಾರ್ಲೊಟಾ ಸಿಗಾಂಡಾ ಎಸ್ಟ್ರೆಲ್ಲಾ ಮೆಡಿಟರೇನಿಯನ್ ಓಪನ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.