ADVERTISEMENT

ಬಿಲಿಯರ್ಡ್ಸ್‌: ಪಂಕಜ್ ಗೆಲುವಿನ ಓಟ

ಪಿಟಿಐ
Published 30 ಏಪ್ರಿಲ್ 2025, 14:42 IST
Last Updated 30 ಏಪ್ರಿಲ್ 2025, 14:42 IST
ಪಂಕಜ್‌ ಅದ್ವಾಣಿ
ಪಂಕಜ್‌ ಅದ್ವಾಣಿ   

ಮುಂಬೈ: ಭಾರತದ ಅಗ್ರಮಾನ್ಯ ಆಟಗಾರ ಪಂಕಜ್ ಅದ್ವಾನಿ ಮತ್ತು ಶಯಾನ್ ರಜ್ಮಿ ಅವರು ಇಲ್ಲಿ ನಡೆಯುತ್ತಿರುವ ಸಿಸಿಐ ಬಿಲಿಯರ್ಡ್ಸ್‌ ಕ್ಲಾಸಿಕ್ ಸ್ಪರ್ಧೆಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ.

ಬುಧವಾರ ನಡೆದ ಗುಂಪು ಹಂತದ ಪಂದ್ಯದಲ್ಲಿ ಪಂಕಜ್‌ 777-387ರ ಅಂತರದಿಂದ ಅಶೋಕ್‌ ಶಾಂಡಿಲ್ಯ ವಿರುದ್ಧ ಗೆಲುವು ಸಾಧಿಸಿದರು.

ಯುವ ಆಟಗಾರ ಶಯಾನ್‌ 409- 403ರಿಂದ ಬ್ರಿಟನ್‌ನ ಮಾರ್ಟಿನ್ ಗುಡ್ವಿಲ್ ಅವರನ್ನು ಮಣಿಸಿದರು. ಅವರು 516-380 ಅಂತರದಿಂದ ರಫತ್ ಹಬೀಬ್ ಅವರನ್ನೂ ಸೋಲಿಸಿದರು.

ADVERTISEMENT

ನಳಿನ್ ಪಟೇಲ್ 750-278ರಿಂದ ಅಕ್ಷಯ್ ಗೋಗ್ರಿ ಅವರನ್ನು ಸೋಲಿಸಿ ತಮ್ಮ ಎರಡನೇ ಗೆಲುವು ದಾಖಲಿಸಿದರು. ಗೋಗ್ರಿ ಅವರು 230–799ರಿಂದ ಸಿದ್ಧಾರ್ಥ್ ಪರೀಖ್ ವಿರುದ್ಧವೂ ಸೋತರು. ಧ್ವಜ್ ಹರಿಯಾ 1222-100ರಿಂದ ಅಮಿತ್ ಸಪ್ರು ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.