ADVERTISEMENT

ಮ್ಯಾರಥಾನ್ ಈಜು: ಚಿನ್ನಕ್ಕೆ ಮುತ್ತಿಟ್ಟ ಬ್ರೆಜಿಲ್‌ನ ಆ್ಯನಾ

ರಾಯಿಟರ್ಸ್
Published 4 ಆಗಸ್ಟ್ 2021, 10:33 IST
Last Updated 4 ಆಗಸ್ಟ್ 2021, 10:33 IST
ಆ್ಯನಾ ಮಾರ್ಸೆಲಾ ಕುನ್ಹಾ– ಎಎಫ್‌ಪಿ ಚಿತ್ರ
ಆ್ಯನಾ ಮಾರ್ಸೆಲಾ ಕುನ್ಹಾ– ಎಎಫ್‌ಪಿ ಚಿತ್ರ   

ಟೋಕಿಯೊ: ಹಾಲಿ ಚಾಂಪಿಯನ್‌ ಶರೋನ್ ವ್ಯಾನ್‌ ರೌವೆಂಡಾಲ್ ಅವರನ್ನು ಹಿಂದಿಕ್ಕಿದಬ್ರೆಜಿಲ್‌ನ ಆ್ಯನಾ ಮಾರ್ಸೆಲಾ ಕುನ್ಹಾ ಮ್ಯಾರಥಾನ್ ಈಜು ಸ್ಪರ್ಧೆಯ 10 ಕಿ.ಮೀ. ವಿಭಾಗದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಒಡೈಬಾ ಮರೀನ್ ಪಾರ್ಕ್‌ನಲ್ಲಿ ನಡೆದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಆ್ಯನಾ ಮತ್ತು ನೆದರ್ಲೆಂಡ್ಸ್‌ನ ಶೆರೋನ್ ಕೇವಲ ಒಂದು ಸೆಕೆಂಡಿಗೂ ಕಡಿಮೆ ಅಂತರದಲ್ಲಿ ಗುರಿ ತಲುಪಿದರು. ಆಸ್ಟ್ರೇಲಿಯಾದ ಕರೀನಾ ಲೀ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಆ್ಯನಾ ಅವರು ವಿಶ್ವ ಚಾಂಪಿಯನ್‌ಷಿಪ್‌ನ ವೈಯಕ್ತಿಕ ವಿಭಾಗದಲ್ಲಿ ಐದು ಚಿನ್ನ ಗೆದ್ದಿದ್ದರೂ ಒಲಿಂಪಿಕ್ಸ್ ಪದಕ ಅವರಿಗೆ ಮರೀಚಿಕೆಯಾಗಿತ್ತು. ಆದರೆ ಇಲ್ಲಿ ಯಶಸ್ಸು ಸಾಧಿಸುವಲ್ಲಿ ಅವರು ತಪ್ಪು ಮಾಡಲಿಲ್ಲ.

ADVERTISEMENT

ಗುರಿ ತಲುಪಲು ಒಂದು ಕಿಲೊ ಮೀಟರ್‌ ದೂರ ಇರುವ ಸಂದರ್ಭದಲ್ಲಿ ಮುಂದೆ ಸಾಗಿದ ಆ್ಯನಾ ಬಳಿಕ ಹಿಂದುಳಿಯಲೇ ಇಲ್ಲ.

‘ಈ ಫಲಿತಾಂಶ ನಿರೀಕ್ಷಿಸಿರಲಿಲ್ಲ. ಅತ್ಯಂತ ಖುಷಿಯಾಗಿದೆ‘ ಎಂದು ಆ್ಯನಾ ಸಂಭ್ರದದ ನಗೆ ಬೀರಿದರು.

ಫಲಿತಾಂಶ
ಸ್ಪರ್ಧಿ ದೇಶ ಸಮಯ
ಆ್ಯನಾ ಮಾರ್ಸೆಲಾ ಕುನ್ಹಾ ಬ್ರೆಜಿಲ್‌ 1 ತಾಸು 59 ನಿ.30.8 ಸೆ.
ಶರೋನ್ ವ್ಯಾನ್ ರೌಂಡೇಲಾ ನೆದರ್ಲೆಂಡ್ಸ್ 1 ತಾಸು 59 ನಿ.31.7 ಸೆ.
ಕರೀನಾ ಲೀ ಆಸ್ಟ್ರೇಲಿಯಾ 1 ತಾಸು 59 ನಿ. 32.5 ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.