
ಪಿಟಿಐ
ಅನಾಹತ್ ಸಿಂಗ್
ನವದೆಹಲಿ: ಭಾರತದ ಹದಿಹರೆಯದ ತಾರೆ ಅನಾಹತ್ ಸಿಂಗ್ ಅವರು ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ಸ್ಕ್ವಾಷ್ ಆನ್ ಫೈರ್ ಓಪನ್‌ನಲ್ಲಿ ಫೈನಲ್ ತಲುಪಿದರು.
17 ವರ್ಷದ ಅನಾಹತ್ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ 11-9, 11-3, 9-11, 11-5 (3-1) ಅಂತರದಿಂದ ಅಮೆರಿಕದ ಸಬ್ರಿನಾ ಸೋಭಿ ಅವರನ್ನು ಮಣಿಸಿದರು. ಪಿಎಸ್‌ಎ ಕಂಚಿನ ಮಟ್ಟದ ಟೂರ್ನಿ ಯಲ್ಲಿ ಪ್ರಶಸ್ತಿ ಸುತ್ತಿಗೆ ಮುನ್ನಡೆದರು.
ವಿಶ್ವದ 31ನೇ ಕ್ರಮಾಂಕದ ಅನಾಹತ್ ಅವರು ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಜಾರ್ಜಿನಾ ಕೆನಡಿ (ಇಂಗ್ಲೆಂಡ್) ಅವರನ್ನು ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.