ಸಾಂದರ್ಭಿಕ ಚಿತ್ರ
ಕ್ವಾಲಾಲಂಪುರ: ಭಾರತದ ಅನಾಹತ್ ಸಿಂಗ್ ಮತ್ತು ವೀರ್ ಚೋತ್ರಾಣಿ ಅವರು ಏಷ್ಯನ್ ಸ್ಕ್ವಾಷ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಭಾನುವಾರ ಪ್ರಶಸ್ತಿ ಗೆದ್ದರು. ಈ ಮೂಲಕ ಷಿಕಾಗೊದಲ್ಲಿ ಮೇ ತಿಂಗಳಿನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ಗೆ ಟಿಕೆಟ್ ಪಡೆದರು.
17 ವರ್ಷ ವಯಸ್ಸಿನ ಅನಾಹತ್ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ 11-4, 9-11, 11-2, 11-8ರಿಂದ ಹಾಂಗ್‌ಕಾಂಗ್ ಚೀನಾದ ಟೋಬಿ ತ್ಸೆ ಅವರನ್ನು ಮಣಿಸಿದರು.
ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ 23 ವರ್ಷ ವಯಸ್ಸಿನ ಚೋತ್ರಾಣಿ 11-3, 11-4, 11-8ರಿಂದ ಆತಿಥೇಯ ಮಲೇಷ್ಯಾದ ಅಮೇಶನರಾಜ್ ಚಂದರನ್ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.