
ಪ್ರಜಾವಾಣಿ ವಾರ್ತೆ
ಪ್ರಶಸ್ತಿಯೊಂದಿಗೆ ತನಿಷ್ಕಾ ಕಪಿಲ್ ಕಾಲಭೈರವ
ಬೆಂಗಳೂರು: ಯಶಸ್ಸಿನ ಓಟ ಮುಂದುವರಿಸಿರುವ ಕರ್ನಾಟಕದ ಉದಯೋನ್ಮುಖ ಆಟಗಾರ್ತಿ ತನಿಷ್ಕಾ ಕಪಿಲ್ ಕಾಲಭೈರವ ಅವರು ರಾಂಚಿಯಲ್ಲಿ ನಡೆದ ರಾಷ್ಟ್ರೀಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ 15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ರಾಂಚಿಯ ಹೊರವಲಯದಲ್ಲಿನ ಹೋಟವಾರ್‌ನಲ್ಲಿ ಬುಧವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ತನಿಷ್ಕಾ ಅವರು 11–6, 11–7, 11–8 ರಿಂದ ಪಶ್ಚಿಮ ಬಂಗಾಳದ ಅಹೋನಾ ರಾಯ್ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸಿದರು.
ಇದಕ್ಕೆ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ತನಿಷ್ಕಾ 11–8, 11–8, 11–7ರಿಂದ ತಮಗಿಂತಲೂ ಮೇಲಿನ ಕ್ರಮಾಂಕದ ಶ್ರೀಜನಿ ಚಕ್ರವರ್ತಿ (ಪಶ್ಚಿಮ ಬಂಗಾಳ) ಅವರನ್ನು ಮಣಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.