ADVERTISEMENT

ಯುರೋಪಿಯನ್ ಅಥ್ಲೆಟಿಕ್ಸ್: ಅನಿಮೇಶ್‌ ಕುಜೂರ್‌ ರಾಷ್ಟ್ರೀಯ ದಾಖಲೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 0:59 IST
Last Updated 8 ಜುಲೈ 2025, 0:59 IST
ಅನಿಮೇಶ್‌ ಕುಜೂರ್‌
ಅನಿಮೇಶ್‌ ಕುಜೂರ್‌   

ನವದೆಹಲಿ: ಭಾರತದ ಉದಯೋನ್ಮುಖ ಸ್ಪ್ರಿಂಟರ್‌ ಅನಿಮೇಶ್ ಕುಜೂರ್‌ ಅವರು ಗ್ರೀಸ್‌ನಲ್ಲಿ ನಡೆಯುತ್ತಿರುವ ಯುರೋಪಿಯನ್ ಅಥ್ಲೆಟಿಕ್ಸ್ 100 ಮೀ ಓಟದಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.

22 ವರ್ಷ ವಯಸ್ಸಿನ ಕುಜೂರ್‌ ಅವರು 10.18 ಸೆಕೆಂಡುಗಳಲ್ಲಿ ಗುರಿಮುಟ್ಟುವ ಮೂಲಕ ಪ್ರಶಸ್ತಿ ಗೆದ್ದುಕೊಂಡರು. ಜೊತೆಗೆ, ಗುರಿಂದರ್‌ವೀರ್‌ ಸಿಂಗ್ ಅವರ ಹೆಸರಿನಲ್ಲಿದ್ದ (10.20 ಸೆ.) ದಾಖಲೆಯನ್ನು ಮುರಿದರು. 

ಒಡಿಶಾದ ಈ ಓಟಗಾರ, 100 ಮೀ. ಮತ್ತು 200 ಮೀ. ಎರಡರಲ್ಲೂ ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ಅಗ್ರಮಾನ್ಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅವರು ಈ ವರ್ಷದ ಫೆಡರೇಷನ್ ಕಪ್‌ ಸೀನಿಯರ್ ರಾಷ್ಟ್ರೀಯ ಅಥ್ಲೆಟಿಕ್‌ ಸ್ಪರ್ಧೆಗಳ 200 ಮೀ. ಓಟವನ್ನು 20.40 ಸೆಕೆಂಡುಗಳಲ್ಲಿ ಪೂರೈಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.

ADVERTISEMENT

ದಾಖಲೆ ಸುಧಾರಿಸಿಕೊಂಡ ಅಫ್ಸಲ್‌: ಮತ್ತೊಬ್ಬ ಅಥ್ಲೀಟ್‌ ಮೊಹಮ್ಮದ್‌ ಅಫ್ಸಲ್‌ ಅವರು 800 ಮೀ. ಓಟದಲ್ಲಿ ತಮ್ಮ ಹೆಸರಿನಲ್ಲಿಯೇ ಇದ್ದ ರಾಷ್ಟ್ರೀಯ ದಾಖಲೆಯನ್ನು ಸುಧಾರಿಸಿಕೊಂಡರು. ಅವರು, 1 ನಿ. 44.96 ಸೆಕೆಂಡುಗಳಲ್ಲಿ ಗುರಿ ತಲುಪಿ ಸ್ಪರ್ಧೆಯಲ್ಲಿ ಆರನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.