ADVERTISEMENT

Asian Games: ರೋಯಿಂಗ್‌ನಲ್ಲಿ ಭಾರತಕ್ಕೆ ಎರಡು ಬೆಳ್ಳಿ, ಒಂದು ಕಂಚಿನ ಪದಕ

ಪಿಟಿಐ
Published 24 ಸೆಪ್ಟೆಂಬರ್ 2023, 5:58 IST
Last Updated 24 ಸೆಪ್ಟೆಂಬರ್ 2023, 5:58 IST
Venugopala K.
   Venugopala K.

ಹಾಂಗ್‌ಝೌ: ಭಾರತೀಯ ರೋವರ್‌ಗಳು ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಜಯಿಸುವ ಮೂಲಕ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿದ್ದಾರೆ.

ಫುಯಾಂಗ್ ವಾಟರ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ, ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಅವರು ಪುರುಷರ ಲೈಟ್‌ವೇಟ್ ಡಬಲ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದರು.

ಭಾರತದ ಜೋಡಿ 6:28.18 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರೆ, 6:23.16 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಚೀನಾದ ಜುಂಜಿ ಫ್ಯಾನ್ ಮತ್ತು ಮ್ಯಾನ್ ಸನ್ ಅವರು ಚಿನ್ನದ ಪದಕ ಪಡೆದರು.

ADVERTISEMENT

ಉಜ್ಬೇಕಿಸ್ತಾನ್ ಜೋಡಿ ಶಖ್ಜೋದ್ ನುರ್ಮಾಟೋವ್ ಮತ್ತು ಸೊಬಿರ್ಜಾನ್ ಸಫರೊಲಿಯೆವ್ ಅವರು 6:33.42 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಕಂಚಿನ ಪದಕ ಪಡೆದರು.

ನೀರಜ್, ನರೇಶ್ ಕಲ್ವಾನಿಯಾ, ನೀತೀಶ್ ಕುಮಾರ್, ಚರಂಜಿತ್ ಸಿಂಗ್, ಜಸ್ವಿಂದರ್ ಸಿಂಗ್, ಭೀಮ್ ಸಿಂಗ್, ಪುನೀತ್ ಕುಮಾರ್ ಮತ್ತು ಆಶಿಶ್ ಅವರನ್ನು ಒಳಗೊಂಡ ಭಾರತ ತಂಡವು ಪುರುಷರ ಎಂಟು ಮಂದಿಯ ಟೀಮ್ ಈವೆಂಟ್‌ನಲ್ಲಿ 5:40.17 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಬೆಳ್ಳಿ ಗಳಿಸಿತು.

ಲೇಖ್ ರಾಮ್ ಮತ್ತು ಬಾಬು ಲಾಲ್ ಯಾದವ್ ಪುರುಷರ ಜೋಡಿ(men’s pair) ಫೈನಲ್‌ನಲ್ಲಿ ಮೂರನೇ ಸ್ಥಾನ ಗಳಿಸುವ ಮೂಲಕ ಕಂಚಿನ ಪದಕ ಗೆದ್ದು, ಭಾರತಕ್ಕೆ ಮೂರನೇ ಪದಕ ತಂದುಕೊಟ್ಟರು. ಈ ಜೋಡಿ 6:50.41 ಸೆಕೆಂಡ್‌ಗಳಲ್ಲಿ ಗುರಿ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.