ADVERTISEMENT

ಏಷ್ಯನ್‌ ಕ್ರೀಡಾಕೂಟ: ಸ್ಕ್ವಾಷ್‌ನಲ್ಲಿ ಭಾರತ ಮಹಿಳಾ ತಂಡ ಫೈನಲ್‌ಗೆ, ಬೆಳ್ಳಿ ಖಚಿತ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 7:30 IST
Last Updated 31 ಆಗಸ್ಟ್ 2018, 7:30 IST
ಭಾರತ ತಂಡದ ಜೋಷ್ನ ಚಿನ್ನಪ್ಪ ಅವರ ಆಟದ ವೈಖರಿ. ಚಿತ್ರ: ಎಎಫ್‌ಪಿ
ಭಾರತ ತಂಡದ ಜೋಷ್ನ ಚಿನ್ನಪ್ಪ ಅವರ ಆಟದ ವೈಖರಿ. ಚಿತ್ರ: ಎಎಫ್‌ಪಿ   

ಜಕಾರ್ತ:ಏಷ್ಯನ್‌ ಕ್ರೀಡಾ ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಮಹಿಳೆಯರ ಸ್ಕ್ವಾಷ್‌ ತಂಡ ಶುಕ್ರವಾರ ನಡೆದ ಪಂದ್ಯದಲ್ಲಿ ಚಾಂಪಿಯನ್‌ ಮಲೇಷ್ಯಾ ತಂಡವನ್ನು ಮಣಿಸಿ ಫೈನಲ್‌ ಪ್ರವೇಶಿಸಿದೆ.

ಭಾರತ ತಂಡ ಮಲೇಷ್ಯಾವನ್ನು 2–0 ಅಂತರದಲ್ಲಿ ಸೋಲಿಸಿತು. ಇದರೊಂದಿಗೆ ಭಾರತಕ್ಕೆ ಮತ್ತೊಂದು ಬೆಳ್ಳಿಪದಕವನ್ನು ಖಚಿತಪಡಿಸಿದೆ.

ಭಾರತ ತಂಡದಲ್ಲಿ ಜೋಷ್ನ ಚಿನ್ನಪ್ಪ, ದೀಪಿಕಾ ಪಲಿಕಲ್‌ ಕಾರ್ತಿಕ್‌, ಸುನೈನಾ ಕುರುವಿಲ್ಲಾ ಮತ್ತು ತನ್ವಿ ಖನ್ನಾ ಅವರನ್ನೊಳಗೊಂಡ ತಂಡವು ಮಲೇಷ್ಯಾ ತಂಡವನ್ನು ಮಣಿಸಿ, ಗೆಲುವಿನ ನಗೆ ಬೀರಿತು.

ADVERTISEMENT

ಭಾರತ ಪುರುಷ ತಂಡ ಸೆಮಿಫೈನಲ್‌ನಲ್ಲಿ ಹಾಂಕಾಂಗ್‌ ವಿರುದ್ಧ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.