ADVERTISEMENT

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ ದೆಹಲಿಯಿಂದ ದುಬೈಗೆ ಸ್ಥಳಾಂತರ

ಪಿಟಿಐ
Published 28 ಏಪ್ರಿಲ್ 2021, 13:48 IST
Last Updated 28 ಏಪ್ರಿಲ್ 2021, 13:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮುಂದಿನ ತಿಂಗಳು ಇಲ್ಲಿ ನಿಗದಿಯಾಗಿದ್ದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ಅನ್ನು ಕೋವಿಡ್‌–19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬುಧವಾರ ದುಬೈಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಭಾರತ ಬಾಕ್ಸಿಂಗ್ ಫೆಡರೇಷನ್‌, ಯುಎಇ ಫೆಡರೇಷನ್‌ನೊಂದಿಗೆ ಸಹ ಆಯೋಜಕವಾಗಿ ಉಳಿಯಲಿದೆ.

ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಮೇ 21ರಿಂದ 31ರವರೆಗೆ ಚಾಂಪಿಯನ್‌ಷಿಪ್ ನಡೆಯಬೇಕಿತ್ತು. ಆದರೆ ದೆಹಲಿಯಲ್ಲಿ ಈಗ ಪ್ರತಿದಿನ 20 ಸಾವಿರಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿವೆ.

‘ಭಾರತಕ್ಕೆ ಅಂತರರಾಷ್ಟ್ರೀಯ ಪ್ರಯಾಣ ನಿರ್ಬಂಧದ ಹಿನ್ನೆಲೆಯಲ್ಲಿ, ನಮ್ಮ ಫೆಡರೇಷನ್‌, ಏಷ್ಯನ್‌ ಬಾಕ್ಸಿಂಗ್ ಫೆಡರೇಷನ್‌ನೊಂದಿಗೆ (ಎಎಸ್‌ಬಿಸಿ) ಚರ್ಚಿಸಿದ್ದು ಮುಂಬರುವ ಪುರುಷ ಮತ್ತು ಮಹಿಳೆಯರಏಷ್ಯನ್‌ ಚಾಂಪಿಯನ್‌ಷಿಪ್‌ಗಳನ್ನು ದುಬೈಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ‘ ಎಂದು ಭಾರತ ಬಾಕ್ಸಿಂಗ್ ಫೆಡರೇಷನ್‌ (ಬಿಎಫ್‌ಐ) ಹೇಳಿದೆ.

ADVERTISEMENT

ದುಬೈನಲ್ಲಿ ಚಾಂಪಿಯನ್‌ಷಿಪ್ ಮೇ 21ರಿಂದ ಜೂನ್ 1ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.