ADVERTISEMENT

ಕೋವಿಡ್‌–19 ಪರಿಣಾಮ: ಕೈ ಕುಲುಕುವುದಿಲ್ಲ, ನಮಸ್ತೆ ಮಾತ್ರ: ಸಿಂಧು

ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಉವಾಚ

ರಾಯಿಟರ್ಸ್
Published 8 ಮಾರ್ಚ್ 2020, 20:00 IST
Last Updated 8 ಮಾರ್ಚ್ 2020, 20:00 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ನವದೆಹಲಿ: ‘ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಯಾರೊಂದಿಗೂ ಕೈಕುಲುಕುವುದಿಲ್ಲ. ಬದಲಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ನಮಸ್ಕಾರ ಹೇಳುತ್ತೇನೆ’ ಎಂದು ವಿಶ್ವ ಚಾಂಪಿಯನ್‌ ಆಟಗಾರ್ತಿ, ಭಾರತದ ಪಿ.ವಿ.ಸಿಂಧು ಹೇಳಿದ್ದಾರೆ. ವಿಶ್ವದೆಲ್ಲೆಡೆ ಹಬ್ಬುತ್ತಿರುವ ಕೋವಿಡ್‌–19 ಸೋಂಕು ಭೀತಿಯೇ ಇದಕ್ಕೆ ಕಾರಣ.

ವಿಶ್ವದಾದ್ಯಂತ 1,06,000ಕ್ಕಿಂತ ಹೆಚ್ಚು ಜನ ಕೋವಿಡ್‌ ಸೋಂಕು ಪೀಡಿತರಾಗಿದ್ದಾರೆ. 3,600 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿನ ಭೀತಿಯು ಒಲಿಂಪಿಕ್‌ ವರ್ಷದಲ್ಲಿ ಕ್ರೀಡಾಪಟುಗಳ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವಂತೆ ಮಾಡುತ್ತಿದೆ.

‘ಕೈಕುಲುಕುವುದನ್ನು ನಾವು ತಪ್ಪಿಸಬೇಕಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇದೊಂದು ಉತ್ತಮ ಕ್ರಮ. ಇದೇ 11ರಿಂದ 16ರವರೆಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಕೇವಲ ನಮಸ್ತೆ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತೇನೆ’ ಎಂದು ವಿಶ್ವದ ಆರನೇ ರ‍್ಯಾಂಕಿನ ಆಟಗಾರ್ತಿ ಸಿಂಧು, ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.