ADVERTISEMENT

ಬ್ಯಾಸ್ಕೆಟ್‌ಬಾಲ್‌: ಜೈನ್‌ ತಂಡಕ್ಕೆ ಎರಡನೇ ಗೆಲುವು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 23:32 IST
Last Updated 11 ಫೆಬ್ರುವರಿ 2026, 23:32 IST
<div class="paragraphs"><p>ಬ್ಯಾಸ್ಕೆಟ್‌ಬಾಲ್‌</p></div>

ಬ್ಯಾಸ್ಕೆಟ್‌ಬಾಲ್‌

   

ಬೆಂಗಳೂರು: ಹರ್ಷಿತಾ ಮತ್ತು ಆದ್ಯಾ ಗೌಡ ಅವರ ಆಟದ ನೆರವಿನಿಂದ ಆತಿಥೇಯ ಜೈನ್‌ ವಿಶ್ವವಿದ್ಯಾಲಯ ತಂಡವು ಬುಧವಾರ  ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಗೆಲುವು ದಾಖಲಿಸಿತು.

ಕನಕಪುರ ರಸ್ತೆಯಲ್ಲಿರುವ ಜೈನ್ ವಿ.ವಿಯ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಎರಡನೇ ದಿನದ ಪಂದ್ಯದಲ್ಲಿ ಜೈನ್‌ ತಂಡವು 65–25ರಿಂದ ಕಲ್ಕತ್ತಾ ವಿಶ್ವವಿದ್ಯಾಲಯ ತಂಡವನ್ನು ಮಣಿಸಿತು. ಜೈನ್‌ ವಿ.ವಿಯ ಹರ್ಷಿತಾ 13 ಮತ್ತು ಆದ್ಯಾ 10 ಅಂಕ ಗಳಿಸಿದರು. 

ADVERTISEMENT

ಎರಡನೇ ದಿನ ಫಲಿತಾಂಶಗಳು: ಚಂಡೀಗಢ ವಿ.ವಿ 70–59ರಿಂದ ಡಿಎವಿ ಇಂದೋರ್ ವಿರುದ್ಧ; ಜೈನ್‌ ವಿ.ವಿ 65–25ರಿಂದ ಕಲ್ಕತ್ತಾ ವಿ.ವಿ ವಿರುದ್ಧ; ಎಸ್‌ಆರ್‌ಎಂ ವಿ.ವಿ ಚೆನ್ನೈ 58–15ರಿಂದ ಎಂಬಿಎಸ್‌ಪಿಎಸ್‌ಯು ಪಟಿಯಾಲ ವಿರುದ್ಧ; ಲವ್ಲಿ ಪ್ರೊಫೆಷನಲ್ ವಿ.ವಿ 63–58ರಿಂದ ಕ್ರೈಸ್ಟ್‌ ವಿ.ವಿ ವಿರುದ್ಧ; ಐಟಿಎಂ ವಿ.ವಿ 65–30 ಎಸ್‌ಜಿಜಿವಿಎ ವಿ.ವಿ ವಿರುದ್ಧ; ಎಲ್‌ಎನ್‌ಐಪಿಇ ವಿ.ವಿ 68–28ರಿಂದ ಪಿಟಿ ರವಿಶಂಕರ್‌ ವಿ.ವಿ ವಿರುದ್ಧ ಗೆಲುವು ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.