ಪ್ರೊ ಕಬಡ್ಡಿ ಲೀಗ್
ನವದೆಹಲಿ: ರೇಡರ್ ಅಲಿರೆಜಾ ಮಿರ್ಜೈಯನ್ ಅವರ ‘ಸೂಪರ್ ಟೆನ್’ ಸಾಹಸದ ಜತೆಗೆ ಡಿಫೆಂಡಿಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ 21 ಅಂಕಗಳಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಬಗ್ಗುಬಡಿಯಿತು.
ಇಲ್ಲಿನ ತ್ಯಾಗರಾಜ್ ಕಾಂಪ್ಲೆಕ್ಸ್ ನಲ್ಲಿ ಶನಿವಾರ ಆರಂಭಗೊಂಡ ‘ಡೆಲ್ಲಿ ಲೆಗ್’ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು 47–26ರಿಂದ ಪಾರಮ್ಯ ಸಾಧಿಸಿತು.
ದಿನದ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವು 36–23ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿತು.
ಇಂದಿನ ಪಂದ್ಯಗಳು
ದಬಂಗ್ ಡೆಲ್ಲಿ–ಪುಣೇರಿ ಪಲ್ಟನ್ (ರಾತ್ರಿ 8)
ಬೆಂಗಾಲ್ ವಾರಿಯರ್ಸ್– ಬೆಂಗಳೂರು ಬುಲ್ಸ್ (ರಾತ್ರಿ 9)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.