ಬ್ಯಾಂಕಾಕ್: ಭಾರತದ ಬಾಕ್ಸರ್‌ಗಳು ಥಾಯ್ಲೆಂಡ್ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಎಂಟು ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದರು. ದೀಪಕ್ ಮತ್ತು ನಮನ್ ತನ್ವರ್ ಅವರು ಭಾನುವಾರ ತಮ್ಮ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದರು.
ಪುರುಷರ 75 ಕೆ.ಜಿ ವಿಭಾಗದ ಫೈನಲ್‌ನಲ್ಲಿ ದೀಪಕ್ 5–0 ಅಂತರದಿಂದ ಉಜ್ಬೇಕಿಸ್ತಾನದ ಅಬ್ದುರಖಿಮೋವ್ ಜಾವೋಖಿರ್ ಅವರನ್ನು ಸೋಲಿಸಿ ಚಿನ್ನ ಗೆದ್ದರೆ, 90 ಕೆ.ಜಿ ಫೈನಲ್‌ನಲ್ಲಿ ನಮನ್ 4–1 ಅಂತರದಿಂದ ಚೀನಾದ ಹಾನ್ ಕ್ಸುಯೆಜೆನ್ ಅವರನ್ನು ಮಣಿಸಿ ಸ್ವರ್ಣಕ್ಕೆ ಕೊರಳೊಡ್ಡಿದರು.
ಮಹಿಳೆಯರ 80 ಕೆ.ಜಿ ಮೇಲ್ಪಟ್ಟ ವಿಭಾಗದ ಫೈನಲ್‌ನಲ್ಲಿ ಕಿರಣ್ 2–3ರಿಂದ ಕಜಕಿಸ್ತಾನದ ಯೆಲ್ಡಾನಾ ತಲಿಪೋವಾ ಅವರಿಗೆ ಸೋತು ಬೆಳ್ಳಿ ತಮ್ಮದಾಗಿಸಿಕೊಂಡರು. ತಮನ್ನಾ (51 ಕೆ.ಜಿ), ಪ್ರಿಯಾ (57 ಕೆ.ಜಿ), ಸಂಜು (60 ಕೆ.ಜಿ), ಸನೆಹ್ (70 ಕೆ.ಜಿ) ಮತ್ತು ಲಾಲ್ಫಕ್ಮಾವಿ ರಾಲ್ಟೆ (80 ಕೆಜಿ) ಕಂಚಿನ ಪದಕ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.