ADVERTISEMENT

ಇಂಡಿಯಾ ಓಪನ್‌, ಹೈದರಾಬಾದ್ ಓಪನ್ ರದ್ದು

ಸುಧೀರ್‌ಮನ್ ಕಪ್‌, ವಿಶ್ವ ಟೂರ್ ಫೈನಲ್ಸ್‌ ಸ್ಥಳಾಂತರ; ಹೊಸ ವೇಳಾಪಟ್ಟಿ ಪ್ರಕಟಿಸಿದ ಬಿಡಬ್ಲ್ಯುಎಫ್‌

ಪಿಟಿಐ
Published 28 ಜೂನ್ 2021, 11:33 IST
Last Updated 28 ಜೂನ್ 2021, 11:33 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ನವದೆಹಲಿ: ಇಂಡಿಯಾ ಓಪನ್‌ ಸೂಪರ್ 500 ಮತ್ತು ಹೈದರಾಬಾದ್ ಓಪನ್ ಸೂಪರ್ 100 ಟೂರ್ನಿಗಳನ್ನು ಕೋವಿಡ್ ಕಾರಣದಿಂದ ರದ್ದುಗೊಳಿಸಿರುವ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್‌) ಈ ಬಾರಿ ಉಳಿದಿರುವ ಟೂರ್ನಿಗಳ ಹೊಸ ವೇಳಾಪಟ್ಟಿ ಪ್ರಕಟಿಸಿದೆ.

ಒಲಿಂಪಿಕ್ಸ್ ಅರ್ಹತೆಯ ಟೂರ್ನಿಗಳಲ್ಲಿ ಒಂದಾಗಿದ್ದ ಇಂಡಿಯಾ ಓಪನ್ ಟೂರ್ನಿಯನ್ನು ಮೇ 11ರಿಂದ 16ರ ವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದ ಕಾರಣ ಮುಂದೂಡಲಾಗಿತ್ತು. ಹೈದರಾಬಾದ್ ಓಪನ್ ಆಗಸ್ಟ್ 24ರಿಂದ 29ರ ವರೆಗೆ ನಡೆಯಬೇಕಾಗಿತ್ತು.

ಹೊಸ ವೇಳಾಪಟ್ಟಿಯಲ್ಲಿ ಟೂರ್ನಿ ಸೈಯದ್ ಮೋದಿ ಟೂರ್ನಿಗೆ ಅವಕಾಶ ನೀಡಲಾಗಿದೆ. ಇದು ಲಖನೌದಲ್ಲಿ ಅಕ್ಟೋಬರ್ 12ರಿಂದ 17ರ ವರೆಗೆ ನಡೆಯಲಿದೆ.ಸೆ‍ಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಚೀನಾದಲ್ಲಿ ನಡೆಯಬೇಕಾಗಿದ್ದ ಸುಧೀರ್‌ಮನ್ ಕಪ್ ಫೈನಲ್ಸ್‌ ಟೂರ್ನಿಯನ್ನು ಫಿನ್ಲೆಂಡ್‌ಗೂ ಈ ಋತುವಿನ ಕೊನೆಯ ವರ್ಲ್ಡ್‌ ಟೂರ್ ಫೈನಲ್ಸ್‌ ಇಂಡೊನೇಷ್ಯಾಗೂ ಸ್ಥಳಾಂತರಿಸಲಾಗಿದೆ. ಸ್ಪೇನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ ಎರಡು ವಾರ ತಡವಾಗಿ ಆರಂಭವಾಗಲಿದೆ.

ADVERTISEMENT

ಟೂರ್ನಿಗಳ ಹೊಸ ವೇಳಾಪಟ್ಟಿ

ಟೂರ್ನಿಯ ಹೆಸರು;ನಡೆಯುವ ಸ್ಥಳ;ದಿನಾಂಕ

ಸುಧೀರ್‌ಮನ್‌ ಕಪ್;ವಂತಾ (ಫಿನ್ಲೆಂಡ್‌);ಸೆ.26–ಅ.3

ಥಾಮಸ್, ಉಬರ್ ಕಪ್;ಆರ್ಹಸ್‌ (ಡೆನ್ಮಾರ್ಕ್‌);ಅ.9–17

ಡ್ಯಾನಿಸಾ ಓಪನ್;ಒಡೆನ್ಸಿ(ಡೆನ್ಮಾರ್ಕ್‌);ಅ.19–24

ಫ್ರೆಂಚ್ ಓಪನ್‌;ಪ್ಯಾರಿಸ್‌;ಅ.26–31

ಸಾರ್ಲಾರ್ಲಕ್ಸ್‌ ಓಪನ್;ಸಾರ್‌ಬ್ರಕನ್(ಜರ್ಮನಿ);ನ.2–7

ಇಂಡೊನೇಷ್ಯಾ ಮಾಸ್ಟರ್ಸ್‌;ಇಂಡೊನೇಷ್ಯಾ;ನ.16-21

ಇಂಡೊನೇಷ್ಯಾ ಓಪನ್;ಇಂಡೊನೇಷ್ಯಾ;ನ.23-28

ವರ್ಲ್ಡ್‌ ಟೂರ್‌ ಫೈನಲ್ಸ್;ಇಂಡೊನೇಷ್ಯಾ;ಡಿ.1–5

ವಿಶ್ವ ಚಾಂಪಿಯನ್‌ಷಿಪ್‌;ಹೆಲ್ವಾ(ಸ್ಪೇನ್);ಡಿ.12–19

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.