ADVERTISEMENT

ಕ್ಲಚ್‌ ಚೆಸ್‌ ಲೆಜೆಂಡ್ಸ್‌ ಪಂದ್ಯ: ಕ್ಯಾಸ್ಪರೋವ್‌ಗೆ ಆರಂಭದ ಮುನ್ನಡೆ

ಪಿಟಿಐ
Published 9 ಅಕ್ಟೋಬರ್ 2025, 14:45 IST
Last Updated 9 ಅಕ್ಟೋಬರ್ 2025, 14:45 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ಸೇಂಟ್‌ ಲೂಯಿ: ರಷ್ಯಾದ ಮಹಾನ್‌ ಆಟಗಾರರಲ್ಲಿ ಒಬ್ಬರಾದ ಗ್ಯಾರಿ ಕ್ಯಾಸ್ಪರೋವ್ ಅವರು ಭಾರತದ ದಿಗ್ಗಜ ವಿಶ್ವನಾಥನ್ ಆನಂದ್ ವಿರುದ್ಧ ನಡೆಯುತ್ತಿರುವ ‘ಕ್ಲಚ್‌ ಚೆಸ್‌’ ಪಂದ್ಯಾವಳಿಯ (ಲೆಜೆಂಡ್ಸ್‌ ಟೂರ್ನಿಯ) ಮೊದಲ ದಿನದ ಕೊನೆಗೆ 2.5–1.5 ರಲ್ಲಿ ಮುನ್ನಡೆ ಸಾಧಿಸಿದರು.

ಗುರುವಾರ ಸೇಂಟ್‌ ಲೂಯಿಯಲ್ಲಿ ಮಾಜಿ ವಿಶ್ವ ಚಾಂಪಿಯನ್ನರ ಮುಖಾಮುಖಿ  ಆರಂಭವಾಯಿತು. ನಿವೃತ್ತರಾಗಿ 21 ವರ್ಷಗಳ ನಂತರವೂ ತಮ್ಮಲ್ಲಿ ಆಟವಿನ್ನೂ ಉಳಿದಿದೆ ಎನ್ನುವುದನ್ನು 62 ವರ್ಷ ವಯಸ್ಸಿನ ಕ್ಯಾಸ್ಪರೋವ್‌ ಸಾಬೀತುಪಡಿಸಿದರು. ಆನಂದ್ ಅವರಿಗೂ ಎರಡು ಆಟಗಳಲ್ಲಿ ಗೆಲ್ಲುವ ಅವಕಾಶಗಳಿದ್ದರೂ, ನಿಖರ ನಡೆಗಳನ್ನಿರಿಸದ ಕಾರಣ ಕ್ಯಾಸ್ಪರೋವ್‌ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಆದರೆ ಮೂರನೇ ಪಂದ್ಯದಲ್ಲಿ ಕ್ಯಾಸ್ಪರೋವ್‌ ಎಂಡ್‌ಗೇಮ್‌ನಲ್ಲಿ ಮೇಲುಗೈ ಸಾಧಿಸಿ ಪಂದ್ಯ ಗೆದ್ದುಕೊಂಡರು.

ADVERTISEMENT

ಈ ಪಂದ್ಯಾವಳಿಯಲ್ಲಿ ರ್‍ಯಾಪಿಡ್ ಮತ್ತು ಬ್ಲಿಟ್ಸ್‌ ಆಟವನ್ನು ‘ಚೆಸ್‌ 960’ ಮಾದರಿಯಲ್ಲಿ ಆಡಲಾಗುತ್ತಿದೆ.

ಈ ಹಣಾಹಣಿಯು ₹1.28 ಕೋಟಿ ಬಹುಮಾನ ಹಣ ಹೊಂದಿದೆ. ವಿಜೇತ ಆಟಗಾರ ಸುಮಾರು ₹62 ಲಕ್ಷ ಬಹುಮಾನ ಹಣ ಪಡೆಯಲಿದ್ದಾರೆ. ಎರಡನೇ ದಿನ ಪೈಪೋಟಿ ತೀವ್ರಗೊಳ್ಳುವ ನಿರೀಕ್ಷೆಯಿದೆ. ಪ್ರತಿ ಗೆಲುವಿಗೆ ಆಟಗಾರ ಎರಡು ಪಾಯಿಂಟ್ ಪಡೆಯಲಿದ್ದಾರೆ. ಅಂತಿಮ ದಿನವಂತೂ ಪ್ರತಿ ಆಟ ಗೆಲ್ಲುವ ಆಟಗಾರ ಮೂರು ಪಾಯಿಂಟ್‌ ಗಳಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.