ADVERTISEMENT

ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಹಾಕಿ ಟೂರ್ನಿ: ಬೆಂಗಳೂರು, ಕೊಡಗು ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 0:20 IST
Last Updated 15 ಡಿಸೆಂಬರ್ 2025, 0:20 IST
<div class="paragraphs"><p>ಬಳ್ಳಾರಿಯ ಜಿಲ್ಲಾ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಹಾಕಿ ಕ್ರೀಡಾಕೂಟದ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಕೊಡಗು ಮತ್ತು ಮೈಸೂರು ತಂಡಗಳ ಆಟಗಾರರ ಸೆಣಸಾಟ</p></div>

ಬಳ್ಳಾರಿಯ ಜಿಲ್ಲಾ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಹಾಕಿ ಕ್ರೀಡಾಕೂಟದ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಕೊಡಗು ಮತ್ತು ಮೈಸೂರು ತಂಡಗಳ ಆಟಗಾರರ ಸೆಣಸಾಟ

   

ಬಳ್ಳಾರಿ: ‌ಕೊಡಗು ಮತ್ತು ಬೆಂಗಳೂರು ತಂಡಗಳು ಭಾನುವಾರ ಇಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಹಾಕಿ ಟೂರ್ನಿಯಲ್ಲಿ ಕ್ರಮವಾಗಿ ಬಾಲಕಿ ಮತ್ತು ಬಾಲಕರ ವಿಭಾಗದ ಪ್ರಶಸ್ತಿ ಜಯಿಸಿದವು.

ಮೈಸೂರು ಬಾಲಕಿಯರು ಹಾಗೂ ಬಳ್ಳಾರಿ ಬಾಲಕರ ತಂಡಗಳು ರನ್ನರ್ಸ್ ರನ್ನರ್‌ ಆಪ್‌ ಆದವು.

ADVERTISEMENT

ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಪ್ರಾಂಶುಪಾಲರ ಸಂಘ, ಬಳ್ಳಾರಿಯ ಸೇಂಟ್ ಜಾನ್ಸ್ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ನಗರದಲ್ಲಿ ಎರಡು ದಿನಗಳ ಹಾಕಿ ಟೂರ್ನಿ ನಡೆಯಿತು.

ಬಾಲಕಿಯರ ತೀವ್ರ ಸೆಣಸಾಟ: ಬಾಲಕಿಯರ ಫೈನಲ್‌ನಲ್ಲಿ ಕೊಡಗು ಮತ್ತು ಮೈಸೂರು ತಂಡಗಳು ಸಮಬಲದ ಪೈಪೋಟಿ ನಡೆಸಿದವು. ಕೊನೆವರೆಗೆ ಕುತೂಹಲ ಉಳಿಸಿಕೊಂಡಿದ್ದ ಈ ಪಂದ್ಯದ ಅಂತಿಮ ಕ್ವಾರ್ಟರ್‌ನಲ್ಲಿ ಕೊಡಗು ತಂಡ ಏಕೈಕ ಗೋಲು ಬಾರಿಸುವ ಮೂಲಕ ಗೆಲುವು ಸಾಧಿಸಿತು. ಕೊಡಗಿನ ಪ್ರೀತಿಕಾ ಉತ್ತಮ ಡಿಫೆಂಡರ್‌, ಮೈಸೂರಿನ ಯುವಿಕಾ ಉತ್ತಮ ಗೋಲ್‌ ಕೀಪರ್‌, ಮೈಸೂರಿನ ಲಕ್ಷ್ಮೀ ಸ್ಕೋರರ್‌ ಎನಿಸಿಕೊಂಡರು.

ಮಣಿದ ಬಳ್ಳಾರಿ: ಬಳ್ಳಾರಿ ತಂಡ ಫೈನಲ್‌ ನಲ್ಲಿ 1–6 ಅಂತರದಿಂದ ಬೆಂಗಳೂರು ಉತ್ತರ ತಂಡದ ವಿರುದ್ಧ ಸೋತಿತು. ಟೂರ್ನಿಯಲ್ಲಿ ಕೊಡಗಿನ ಪಳಂಗಪ್ಪ ಉತ್ತಮ ಗೋಲ್‌ಕೀಪರ್‌ ಆದರು. ಬಳ್ಳಾರಿಯ ಯಲ್ಲಪ್ಪ ಉತ್ತಮ ಡಿಫೆಂಡರ್‌ ಎನಿಸಿಕೊಂಡರು. ಬೆಂಗಳೂರು ಉತ್ತರ ತಂಡದ ಜಶಿನ್‌ ಉತ್ತಮ ಸ್ಕೋರರ್‌ ಆಗಿ ಹೊರಹೊಮ್ಮಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.