ADVERTISEMENT

CWG 2022: ಬಜರಂಗ್‌ಗೆ ಚಿನ್ನ, ಅನ್ಶುಗೆ ಬೆಳ್ಳಿ

ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಪದಕ ಬೇಟೆ

ಪಿಟಿಐ
Published 6 ಆಗಸ್ಟ್ 2022, 7:43 IST
Last Updated 6 ಆಗಸ್ಟ್ 2022, 7:43 IST
ಬಜರಂಗ್‌ ಪೂನಿಯಾ ಅವರು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಜಾರ್ಜ್‌ ರಾಮ್‌ ಎದುರು ಪೈಪೋಟಿ ನಡೆಸಿದರು –ಪಿಟಿಐ ಚಿತ್ರ
ಬಜರಂಗ್‌ ಪೂನಿಯಾ ಅವರು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಜಾರ್ಜ್‌ ರಾಮ್‌ ಎದುರು ಪೈಪೋಟಿ ನಡೆಸಿದರು –ಪಿಟಿಐ ಚಿತ್ರ   

ಬರ್ಮಿಂಗ್‌ಹ್ಯಾಮ್: ಭಾರತದ ಕುಸ್ತಿಪಟುಗಳಾದ ಬಜರಂಗ್‌ ಪೂನಿಯಾ ಮತ್ತು ಅನ್ಶು ಮಲಿಕ್‌ ಅವರು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದರು.

ಶುಕ್ರವಾರ ನಡೆದ ಪುರುಷರ ಫ್ರೀಸ್ಟೈಲ್‌ ಕುಸ್ತಿಯ 65 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಬಜರಂಗ್‌ ಅವರು ಕೆನಡಾದ ಲಾಕ್ಲನ್‌ ಮೆಕ್‌ಲೀನ್‌ ಎದುರು 9–2 ಪಾಯಿಂಟ್‌ಗಳಿಂದ ಗೆದ್ದರು.

ಬಜರಂಗ್‌ ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಜಾರ್ಜ್‌ ರಾಮ್‌ ವಿರುದ್ದ 10–0 ರಲ್ಲಿ ಜಯ ಸಾಧಿಸಿದ್ದರು. ಮೊದಲ ಸುತ್ತಿನ ಹಣಾಹಣಿಯಲ್ಲಿ ನೌರು ದ್ವೀಪದ ಲೊವ್ ಬಿಂಗ್‌ಹ್ಯಾಮ್‌ ಅವರನ್ನು ಮಣಿಸಿದ್ದರೆ, ಕ್ವಾರ್ಟರ್‌ ಫೈನಲ್‌ನಲ್ಲಿ ಮಾರಿಷಸ್‌ನ ಜೀನ್ ಗಯ್ಲಿಯಾನ್ ಜೊರಿಸ್ ಅವರನ್ನು ಪರಾಭವಗೊಳಿಸಿದ್ದರು.

ADVERTISEMENT

ಅನ್ಶು ಅವರು ಮಹಿಳೆಯರ 57 ಕೆ.ಜಿ. ಫ್ರೀಸ್ಟೈಲ್‌ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಜಯಿಸಿದರು. ಫೈನಲ್‌ನಲ್ಲಿ ಅವರು 3–7 ರಲ್ಲಿ ನೈಜೀರಿಯದ ಒಡುನಯೊ ಅಡೆಕುರೆಯೊ ಎದುರು ಸೋತರು.

ಅನ್ಶು ಅವರು ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ 10–0 ರಲ್ಲಿ ಶ್ರೀಲಂಕಾದ ನೇತಮಿ ಪೊರುತೊತಗೆ ಅವರನ್ನು ಮಣಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಐರಿನಾ ಸೈಮೊನಿಡಿಸ್‌ ಎದುರು ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.