
ಬೆಂಗಳೂರು: ಕೂರ್ಗ್ ಹಾಕ್ಸ್ ತಂಡವು ಭಾನುವಾರ ಮುಕ್ತಾಯಗೊಂಡ ಏಳನೇ ಆವೃತ್ತಿಯ ಚೈರೋಸ್ ಭೀಮಯ್ಯ ಹಾಕಿ ಕಪ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡಿತು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಕಿ ಅರೇನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹಾಕ್ಸ್ ತಂಡವು 7–5ರಿಂದ ಪಳೆ ತಾಲೂಕ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು.
ಸದರ್ನ್ ಕಮಾಂಡ್ ಹಾಗೂ ಡಿವೈಇಎಸ್ ಕರ್ನಾಟಕ ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದವು. ಸಾಯ್ ಎಸ್‌ಟಿಸಿ ತಂಡವು ‘ಶೂಟೌಟ್ ಕಾಂಪಿಟಿಷನ್ ಟ್ರೋಫಿ’ಯನ್ನು ಗೆದ್ದುಕೊಂಡಿತು.
ಭಾರತ ಹಾಕಿ ತಂಡದ ಮಾಜಿ ಗೋಲ್‌ಕೀಪರ್ ಹಾಗೂ ಹಾಕಿ ಕರ್ನಾಟಕ ಅಧ್ಯಕ್ಷ ಎ.ಬಿ.ಸುಬ್ಬಯ್ಯ ಅವರು ವಿಜೇತರಿಗೆ ಟ್ರೋಫಿ ಹಸ್ತಾಂತರಿಸಿದರು. ಭಾರತ ಹಾಕಿ ತಂಡದ ಮಾಜಿ ನಾಯಕ ಅನಿಲ್ ಎಲ್ಡ್ರಿನ್, ಭಾರತ ಹಾಕಿ ತಂಡದ ಮಾಜಿ ಆಟಗಾರ ವಿ.ಎಸ್.ವಿನಯ, ಭಾರತ ಹಾಕಿ ತಂಡದ ಆಟಗಾರರಾದ ಆಭರಣ್ ಸುದೇವ್, ಮೊಹಮ್ಮದ್ ರಾಹೀಲ್ ಮೌಸೀನ್ ಹಾಗೂ ಕಲಿಯಂಡ ಭರತ್ ಇದ್ದರು.
ಕೂರ್ಗ್ ಚಾಲೆಂಜರ್ಸ್ ಚಿಕ್ಕಪೇಟ್ ಅಸೋಸಿಯೇಷನ್ ಆಶ್ರಯದಲ್ಲಿ ಹಾಕಿ ಕರ್ನಾಟಕ ಮತ್ತು ಹಾಕಿ ಇಂಡಿಯಾ ಸಹಯೋಗದಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.