ADVERTISEMENT

ಸ್ಲೊವಾಕಿಯಾದಲ್ಲಿ 35KM ರೇಸ್‌ ವಾಕ್‌: ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪ್ರಿಯಾಂಕಾ

ಪಿಟಿಐ
Published 23 ಮಾರ್ಚ್ 2025, 12:41 IST
Last Updated 23 ಮಾರ್ಚ್ 2025, 12:41 IST
<div class="paragraphs"><p>ಸ್ಲೊವಾಕಿಯಾದಲ್ಲಿ 35KM ರೇಸ್‌ ವಾಕ್‌: ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪ್ರಿಯಾಂಕಾ</p></div>

ಸ್ಲೊವಾಕಿಯಾದಲ್ಲಿ 35KM ರೇಸ್‌ ವಾಕ್‌: ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪ್ರಿಯಾಂಕಾ

   

ಚಿತ್ರಕೃಪೆ: @Priyanka_Goswam (ಎಕ್ಸ್‌)

ನವದೆಹಲಿ: ಕಾಮನ್ವೆಲ್ತ್‌ ಕ್ರೀಡೆಗಳ ಪದಕ ವಿಜೇತೆ ರೇಸ್‌ ವಾಕರ್‌ ಪ್ರಿಯಾಂಕ ಗೋಸ್ವಾಮಿ ಅವರು ಸ್ಲೊವಾಕಿಯಾದ ಡುಡಿನ್ಸ್‌ನಲ್ಲಿ ನಡೆದ ಡುಡಿನ್‌ಸ್ಕಾ 50 ಕೂಟದ ಮಹಿಳೆಯರ 35 ಕಿ.ಮೀ. ಸ್ಪರ್ಧೆಯಲ್ಲಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.

ADVERTISEMENT

ಗೋಸ್ವಾಮಿ ಶನಿವಾರ ನಡೆದ ಸ್ಪರ್ಧೆಯನ್ನು 2ಗಂಟೆ 56 ನಿ. 34 ಸೆ.ಗಳಲ್ಲಿ ಪೂರೈಸಿದರು. ಡುಡಿನ್ಸ್‌ನ ಬೀದಿಗಳಲ್ಲಿ ಮಾರ್ಚ್‌ ತಿಂಗಳಲ್ಲಿ ನಡೆಯುವ ಇದು ವಿಶ್ವ ಅಥ್ಲೆಟಿಕ್ಸ್‌ ರೇಸ್‌ ವಾಕಿಂಗ್‌ ಟೂರ್ ಗೋಲ್ಡ್‌ ಲೇಬಲ್‌ ಕೂಟವಾಗಿದೆ. 44ನೇ ವರ್ಷ ನಡೆಯುತ್ತಿದೆ.

29 ವರ್ಷ ವಯಸ್ಸಿನ ಪ್ರಿಯಾಂಕ ಅವರ ಈ ಹಿಂದಿನ ವೈಯಕ್ತಿಕ ಉತ್ತಮ ಸಾಧನೆ 3ಗಂ.13ನಿ.19 ಸೆ.ಗಳಾಗಿವೆ. ಅವರು 2023ರಲ್ಲಿ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಓಪನ್ ರೇಸ್‌ ವಾಕಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಮಂಜು ರಾಣಿ ಸ್ಥಾಪಿಸಿದ್ದ 2ಗಂ.57ನಿ.54 ಸೆ.ಗಳ ದಾಖಲೆ ಮುರಿದರು.

ಇಕ್ವೆಡೋರ್‌ನ ಪೌಲಾ ಮಿಲೆನಾ ಟೊರೆಸ್‌ (2:44:26) ಮೊದಲ ಸ್ಥಾನ ಪಡೆದರು. ಪೆರುವಿನ ಕಿಂಬರ್ಲಿ ಗಾರ್ಸಿಯಾ (2:45:59) ಮತ್ತು ಪೋಲೆಂಡ್‌ನ ಕಟರ್ಜಿನಾ ಜಿಬೆಬ್ಲೊ (2:46:59) ಕ್ರಮವಾಇಗ ಮೊದಲ ಮೂರು ಸ್ಥಾನ ಪಡೆದರು.

ಪ್ರಿಯಾಂಕಾ ಅವರು 20 ಕಿ.ಮೀ. ರೇಸ್‌ ವಾಕ್‌ನಲ್ಲಿ ರಾಷ್ಟ್ರೀಯ ದಾಖಲೆ (1:28:45) ಹೊಂದಿದ್ದಾರೆ. 2022ರ ಬರ್ಮಿಂಗಂ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 10,000 ಮೀ. ರೇಸ್‌ ವಾಕ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಪುರುಷರ 20 ಕಿ.ಮೀ. ರೇಸ್‌ವಾಕ್‌ನಲ್ಲಿ, ರಾಷ್ಟ್ರೀಯ ದಾಖಲೆ ಹೊಂದಿರುವ ಅಕ್ಷದೀಪ್ ಸಿಂಗ್ ಅವರು 1ಗಂ 24ನಿ 13ಸೆ. ಅವಧಿ ತೆಗೆದುಕೊಂಡು ಆರನೇ ಸ್ಥಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.