ಉಡುಪಿ: ಮೂರು ದಿನಗಳಲ್ಲಿ ಒಟ್ಟು 23 ಕೂಟ ದಾಖಲೆಗಳು ನಿರ್ಮಾಣವಾದ ರಾಜ್ಯ ಜೂನಿಯರ್ ಮತ್ತು 23 ವರ್ಷದೊಳಗಿನವರ ಅಥ್ಲೆಟಿಕ್ಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಬೆಂಗಳೂರು ರನ್ನರ್ ಅಪ್ ಆಯಿತು.
ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಇಲ್ಲಿನ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕೂಟದ ಜೂನಿಯರ್ ಹಂತದ ಎಲ್ಲ ನಾಲ್ಕು ವಯೋಮಾನ ವಿಭಾಗಗಳಲ್ಲೂ ದಕ್ಷಿಣ ಕನ್ನಡ ಸಮಗ್ರ ಪ್ರಶಸ್ತಿ ಗಳಿಸಿತು. 23 ವರ್ಷದೊಳಗಿನವರ ವಿಭಾಗದಲ್ಲಿ ಬೆಂಗಳೂರು ನಗರ ಪಾರಮ್ಯ ಮೆರೆದರೆ ದಕ್ಷಿಣ ಕನ್ನಡ ಎರಡನೇ ಸ್ಥಾನ ಗಳಿಸಿತು.
ಸೋಮವಾರ ಮುಕ್ತಾಯಗೊಂಡ ಕೂಟದಲ್ಲಿ 23 ವರ್ಷದೊಳಗಿನವರ ವಿಭಾಗದಲ್ಲಿ ಬೆಂಗಳೂರು 127 ಪಾಯಿಂಟ್‌ಗಳನ್ನು ಮತ್ತು ದಕ್ಷಿಣ ಕನ್ನಡ 100 ಪಾಯಿಂಟ್‌ಗಳನ್ನು ಕಲೆ ಹಾಕಿತು. 20 ವರ್ಷದೊಳಗಿನವರ ವಿಭಾಗದಲ್ಲಿ ದಕ್ಷಿಣ ಕನ್ನಡ 148, ಬೆಂಗಳೂರು 120, 18 ವರ್ಷದೊಳಗಿನವರ ವಿಭಾಗದಲ್ಲಿ ದಕ್ಷಿಣ ಕನ್ನಡ 87, ಉಡುಪಿ 80, 16 ವರ್ಷದೊಳಗಿನವರ ವಿಭಾಗದಲ್ಲಿ ದಕ್ಷಿಣ ಕನ್ನಡ 77, ಬೆಂಗಳೂರು 66 ಮತ್ತು 14 ವರ್ಷದೊಳಗಿನವರ ವಿಭಾಗದಲ್ಲಿ ದಕ್ಷಿಣ ಕನ್ನಡ 43, ಶಿವಮೊಗ್ಗ 24 ಪಾಯಿಂಟ್ ಗಳಿಸಿತು.
ಪುರುಷರ 23 ವರ್ಷದೊಳಗಿನವರ ವಿಭಾಗದಲ್ಲಿ ಧಾರವಾಡದ ಪ್ರಸನ್ನ ಕುಮಾರ್ (1021ಪಾಯಿಂಟ್ಸ್), 20 ವರ್ಷದೊಳಗಿನವರ ವಿಭಾಗದಲ್ಲಿ ತುಮಕೂರಿನ ನಿತಿನ್ ಗೌಡ (981), 18 ವರ್ಷದೊಳಗಿನವರ ವಿಭಾಗದಲ್ಲಿ ಮೈಸೂರಿನ ಚಿರಂತ್ (1012), 16 ವರ್ಷದೊಗಿನವರ ವಿಭಾಗದಲ್ಲಿ ಶಿವಮೊಗ್ಗದ ಶರತ್ ಕೆ.ಜೆ (802) ಮತ್ತು 14 ವರ್ಷದೊಳಗಿನವರ ವಿಭಾಗದಲ್ಲಿ ಮೈಸೂರಿನ ಆದರ್ಶ್ ಉತ್ತಮ ಕ್ರೀಡಾಪಟು ಎನಿಸಿಕೊಂಡರು. ಮಹಿಳೆಯರ 23 ವರ್ಷದೊಳಗಿನವರ ವಿಭಾಗದಲ್ಲಿ ದಕ್ಷಿಣ ಕನ್ನಡದ ಸಿಂಚನಾ (1003), 20 ವರ್ಷದೊಳಗಿವನರ ವಿಭಾಗದಲ್ಲಿ ಉಡುಪಿಯ ಸ್ತುತಿ ಪಿ.ಶೆಟ್ಟಿ (980), 18 ವರ್ಷದೊಳಗಿನವರ ವಿಭಾಗದಲ್ಲಿ ಬೆಂಗಳೂರಿನ ಸುಚಿತ್ರಾ (962), 16 ವರ್ಷದೊಳಗಿನವರ ವಿಭಾಗದಲ್ಲಿ ಬೆಂಗಳೂರಿನ ಶಮಿಕಾ (961) ಮತ್ತು 14 ವರ್ಷದೊಳಗಿನವರ ವಿಭಾಗದಲ್ಲಿ ದಕ್ಷಿಣ ಕನ್ನಡದ ಅದ್ವಿಕಾ ಉತ್ತಮ ಕ್ರೀಡಾಪಟು ಪ್ರಶಸ್ತಿ ಪಡೆದುಕೊಂಡರು.
ಕೊನೆಯ ದಿನ 5 ದಾಖಲೆಗಳು
ಕೊನೆಯ ದಿನ ಒಟ್ಟು 5 ಕೂಟ ದಾಖಲೆಗಳು ನಿರ್ಮಾಣವಾದವು. 23 ವರ್ಷದೊಳಗಿನವರ 200 ಮೀಟರ್ಸ್ ಓಟದಲ್ಲಿ ಪ್ರಸನ್ನ ಕುಮಾರ್ (21.32ಸೆಕೆಂಡು) 3 ವರ್ಷಗಳ ಹಿಂದಿನ ತಮ್ಮದೇ ದಾಖಲೆ (21.45ಸೆ) ಮುರಿದರು. ಮಹಿಳೆಯರ 200 ಮೀ ಓಟದಲ್ಲಿ ಬೆಂಗಳೂರಿನ ಶ್ರೀಯಾ ರಾಜೇಶ್ (24.75 ಸೆ) ಜ್ಯೋತಿಕಾ (24.90ಸೆ) ಅವರ ದಾಖಲೆಯನ್ನು ಮೀರಿದರು. ಇದೇ ವಯೋಮಾನದವರ 5 ಸಾವಿರ ಮೀ ಓಟದಲ್ಲಿ ಓಂಕಾರ್ (14ನಿಮಿಷ 23.64ಸೆ) ಕಳೆದ ವರ್ಷ ಎ.ಆರ್ ರೋಹಿತ್ (15:03.45) ನಿರ್ಮಿಸಿದ್ದ ದಾಖಲೆ ಮುರಿದರು. 3 ಸಾವಿರ ಮೀಟರ್ಸ್ ಸ್ಟೀಪಲ್ ಚೇಸ್‌ನಲ್ಲಿ ಗಣಪತಿ (9ನಿ 25.93ಸೆ) ಸಂಜೀವ್ ಕುಮಾರ್ (9:52.41) ಹೆಸರಿನಲ್ಲಿದ್ದ ದಾಖಲೆ ಹಿಂದಿಕ್ಕಿದರು. 18 ವರ್ಷದೊಳಗಿನ ಬಾಲಕರ 5 ಸಾವಿರ ಮೀ ರೇಸ್‌ವಾಕ್‌ನಲ್ಲಿ ಸಿದ್ರಾಯಪ್ಪ ಪುಂಜಿ (26ನಿ 03.98ಸೆ) ಕಳೆದ ವರ್ಷ ವಿನಾಯಕ ಜಿ.ಕೆ (27:04.25) ಮಾಡಿದ್ದ ದಾಖಲೆಯನ್ನೂ ಇದೇ ವಯೋಮಾನದ ಬಾಲಕರ 200 ಮೀ ಓಟದಲ್ಲಿ ಚಿರಂತ್ (21.38ಸೆ) 2023ರಲ್ಲಿ ಮುತ್ತಣ್ಣ (21.51ಸೆ) ನಿರ್ಮಿಸಿದ್ದ ದಾಖಲೆಯನ್ನೂ ಹಿಂದಿಕ್ಕಿದರು.
00 ಮೀಟರ್ಸ್ ಓಟದ ನೋಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.