ADVERTISEMENT

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಮೌಲ್ಯಮಾಪನ ಮಾಹಿತಿ ಕೇಳಿದ ದೆಹಲಿ ಹೈಕೋರ್ಟ್

ಪಿಟಿಐ
Published 7 ಮಾರ್ಚ್ 2023, 19:31 IST
Last Updated 7 ಮಾರ್ಚ್ 2023, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ಗೆ ಭಾರತ ತಂಡದಲ್ಲಿ ಸ್ಥಾನ ಗಳಿಸದ ಮೂವರು ಬಾಕ್ಸರ್‌ಗಳ ಮೌಲ್ಯಮಾಪನದ ವರದಿಯನ್ನು ಸಲ್ಲಿಸುವಂತೆ ದೆಹಲಿ ಹೈಕೋರ್ಟ್‌, ಭಾರತ ಬಾಕ್ಸಿಂಗ್‌ ಫೆಡರೇಷನ್‌ಗೆ (ಬಿಎಫ್‌ಐ) ಸೂಚಿಸಿದೆ.

ಭಾರತ ತಂಡದಲ್ಲಿ ತಮಗೆ ಸ್ಥಾನ ನೀಡದಿರುವುದನ್ನು ಪ್ರಶ್ನಿಸಿ ಮೂವರು ಮಹಿಳಾ ಬಾಕ್ಸರ್‌ಗಳಾದ ಮಂಜು ರಾಣಿ, ಶಿಕ್ಷಾ ನರ್ವಾಲ್‌ ಮತ್ತು ಪೂನಂ ಪೂನಿಯಾ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

ರಿಟ್‌ ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಂಡ ಪೀಠ, ಮಧ್ಯಂತರ ಆದೇಶ ನೀಡಲು ನಿರಾಕರಿಸಿತು. ‘ಮೌಲ್ಯಮಾಪನ ವಿವರ ಗಳನ್ನು ಸೋಮವಾರ ಸಲ್ಲಿಸಬೇಕು’ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್‌, ಬಿಎಫ್‌ಐ ಪರ ವಕೀಲ ಹೃಷಿ ಕೇಷ್‌ ಬರುವಾ ಅವರಿಗೆ ಸೂಚಿಸಿದರು.

ADVERTISEMENT

‘ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಬಾಕ್ಸರ್‌ಗಳ ಸಾಮರ್ಥ್ಯವನ್ನು ಪರೀಕ್ಷಿ ಸಲಾಗಿತ್ತು. ಮೌಲ್ಯಮಾಪನದ ಬಳಿಕ ಈ ಮೂವರನ್ನು ತಂಡದಿಂದ ಕೈಬಿ ಡಲಾಗಿತ್ತು’ ಎಂದು ಬರುವಾ ಅವರು ವಿಚಾರಣೆ ವೇಳೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.