ADVERTISEMENT

ಟೋಕಿಯೊ ಒಲಿಂಪಿಕ್ಸ್‌ ವಿಭಿನ್ನ, ಸರಳ?

ಏಜೆನ್ಸೀಸ್
Published 4 ಜೂನ್ 2020, 19:45 IST
Last Updated 4 ಜೂನ್ 2020, 19:45 IST
ಟೋಕಿಯೊ ಒಲಿಂಪಿಕ್ಸ್ (ಸಾಂದರ್ಭಿಕ ಚಿತ್ರ)
ಟೋಕಿಯೊ ಒಲಿಂಪಿಕ್ಸ್ (ಸಾಂದರ್ಭಿಕ ಚಿತ್ರ)   

ಟೋಕಿಯೊ:ಮುಂದಿನ ವರ್ಷಕ್ಕೆ ಮುಂದೂಡಲಾಗಿರುವ ಟೋಕಿಯೊ ಒಲಿಂಪಿಕ್ಸ್ ಒಂದುವೇಳೆ ನಡೆದರೂ ವಿಭಿನ್ನವಾಗಿರಲಿದೆ. ಕ್ರೀಡಾಪಟುಗಳು ಕ್ವಾರಂಟೈನ್‌ಗೆ ಒಳಗಾಗುವುದು, ಪ್ರೇಕ್ಷಕರ ಸಂಖ್ಯೆಯ ಮೇಲೆ ನಿರ್ಬಂಧ ಹೇರುವುದು ಇತ್ಯಾದಿ ಅನಿವಾರ್ಯ ಆಗಿರಲಿದೆ.

ಇತ್ತೀಚಿನ ಕೆಲವು ವಾರಗಳಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ನೀಡಿರುವ ಸಂದರ್ಶನಗಳಲ್ಲೆಲ್ಲ ಖಾಲಿ ಕ್ರಿಡಾಂಗಣಗಳು, ಕ್ವಾರಂಟೈನ್ ಮತ್ತು ವೈರಾಣು ಪರೀಕ್ಷೆಯ ಕುರಿತು ಪದೇ ಪದೇ ಪ್ರಸ್ತಾಪಿಸಿದ್ದಾರೆ.

ಇದೇ ವೇಳೆ ಟೋಕಿಯೊ ಒಲಿಂಪಿಕ್ಸ್‌ನ ಸಿದ್ಧತೆಗಳ ಉಸ್ತುವಾರಿ ಹೊತ್ತಿರುವ ಐಒಸಿ ಸದಸ್ಯ ಜಾನ್ ಕೋಟ್ಸ್‌ ‘ಈ ಒಲಿಂಪಿಕ್ಸ್ ನಿಜಕ್ಕೂ ಸಮಸ್ಯೆಗಳ ನಡುವೆ ನಡೆಯಲಿದೆ. 15 ಸಾವಿರ ಅಥ್ಲೀಟ್‌ಗಳು ಬರಲಿದ್ದು, ಸಿಬ್ಬಂದಿ, ಅಧಿಕಾರಿಗಳು, ಮಾಧ್ಯಮವರು ಮತ್ತು ಸ್ವಯಂ ಸೇವಕರು ಸೇರಿ 80 ಸಾವಿರ ಮಂದಿ ಸೇರಲಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಜನರನ್ನು ನಿಭಾಯಿಸುವುದ ಸವಾಲು’ ಎಂದಿದ್ದರು.

ADVERTISEMENT

‘ಟೋಕಿಯೊ ಒಲಿಂಪಿಕ್ಸ್‌ ವಕ್ತಾರ ಮಸಾ ಟಕಾಯ ಅವರೊಂದಿಗೆ ಗುರುವಾರ ನಡೆದ ಆನ್‌ಲೈನ್ ಸಂವಾದದ ನಂತರ ಜಪಾನ್‌ನ ಮಾಧ್ಯಮಗಳು ‘ವಿಭಿನ್ನ’, ‘ಸಣ್ಣ ಗಾತ್ರದ’ ಮತ್ತು ’ಸರಳ’ ಒಲಿಂಪಿಕ್ಸ್‌ ನಡೆಯಲಿದೆ ಎಂಬ ದಾಟಿಯಲ್ಲಿ ಸುದ್ದಿಗಳನ್ನು ಪ್ರಕಟಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.