ADVERTISEMENT

Tokyo Olympics: ಈಕ್ವೆಸ್ಟ್ರಿಯನ್‌: ಗಮನ ಸೆಳೆದ ಮಿರ್ಜಾ

ಪಿಟಿಐ
Published 30 ಜುಲೈ 2021, 19:45 IST
Last Updated 30 ಜುಲೈ 2021, 19:45 IST
ಫವಾದ್ ಮಿರ್ಜಾ
ಫವಾದ್ ಮಿರ್ಜಾ   

ಟೋಕಿಯೊ: ಬೆಂಗಳೂರಿನ ಫವಾದ್ ಮಿರ್ಜಾ ಒಲಿಂಪಿಕ್ಸ್‌ನಲ್ಲಿ ಶುಕ್ರವಾರ ಆರಂಭವಾದ ಈಕ್ವೆಸ್ಟ್ರಿಯನ್‌ ಸ್ಪರ್ಧೆಯ ಡ್ರೆಸೆಜ್ ವಿಭಾಗದಲ್ಲಿ ಕಣಕ್ಕಿಳಿದರು.

ಮೊದಲ ದಿನ ನಡೆದ ವೈಯಕ್ತಿಕ ವಿಭಾಗದಲ್ಲಿ ಫವಾದ್, ಸಿನೊರ್ ಮೆಡಿಕಾಟ್‌ ಅಶ್ವದೊಂದಿಗೆ ಸ್ಪರ್ಧಿಸಿದರು. 21 ರೈಡರ್‌ಗಳ ಪೈಕಿ ಏಳನೇ ಸ್ಥಾನ ಪಡೆದರು. ಅವರ ಖಾತೆಯಲ್ಲಿ ಈಗ 28.00 ಪೆನಾಲ್ಟಿಸ್‌ ಇವೆ ಎಂದು ಮಿರ್ಜಾ ಅವರು ನೀಡಿರುವ ಮಾಹಿತಿಯನ್ನು ಎಂಬೆಸಿ ಸಮೂಹದ ಪ್ರಕಟಣೆ ತಿಳಿಸಿದೆ.

ಮೊದಲ ದಿನ 42 ರೈಡರ್‌ಗಳು ಭಾಗವಹಿಸಿದ್ದರು. ಶನಿವಾರ ಇನ್ನೂ 21 ರೈಡರ್‌ಗಳು ಸ್ಪರ್ಧಿಸುವರು. ಸದ್ಯ ಒಲಿವರ್ ಟೌನೆಂಡ್ 23.6 ಪೆನಾಲ್ಟಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.