ADVERTISEMENT

ಚೆನ್ನ ಜಿಎಂ ಟೂರ್ನಿ: ಇರಿಗೇಶಿ ಶುಭಾರಂಭ

ಡ್ರಾ ಪಂದ್ಯದಲ್ಲಿ ವಿದಿತ್ ಗುಜರಾತಿ

ಪಿಟಿಐ
Published 7 ಆಗಸ್ಟ್ 2025, 19:16 IST
Last Updated 7 ಆಗಸ್ಟ್ 2025, 19:16 IST
ಅರ್ಜುನ್ ಇರಿಗೇಶಿ
ಅರ್ಜುನ್ ಇರಿಗೇಶಿ   

ಚೆನ್ನೈ : ಭಾರತದ ಅರ್ಜುನ್ ಇರಿಗೇಶಿ ಅವರು ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಗುರುವಾರ  ಅಮೋಘವಾಗಿ ಆಡಿ ಅಮೆರಿಕದ ಅವಂಡರ್‌ ಲಿಯಾಂಗ್ ಅವರನ್ನು ಸೋಲಿಸಿ ಶುಭಾರಂಭ ಮಾಡಿದರು. ಆದರೆ ಭಾರತದ ಮತ್ತೊಬ್ಬ ಆಟಗಾರ ನಿಹಾಲ್ ಸರಿನ್ ಅವರು ಜರ್ಮನಿಯ ವಿನ್ಸೆಂಟ್ ಕೀಮರ್‌ ಅವರಿಗೆ ಮಣಿದರು.

ಮಾಸ್ಟರ್ಸ್ ಮತ್ತು ಚಾಲೆಂಜರ್‌ ವಿಭಾಗಗಳಲ್ಲಿ ರೌಂಡ್‌ ರಾಬಿನ್ ಮಾದರಿಯಲ್ಲಿ ನಡೆಯುವ ಈ ಟೂರ್ನಿಯು 9 ಸುತ್ತುಗಳನ್ನು ಒಳಗೊಂಡಿದೆ. ಒಂದು ಕೋಟಿ ರೂಪಾಯಿ ಬಹುಮಾನ ಮೊತ್ತ ಹೊಂದಿದೆ. ಎರಡೂ ವಿಭಾಗಗಳಲ್ಲಿ ತಲಾ 10 ಮಂದಿ ಭಾಗವಹಿಸುತ್ತಿದ್ದಾರೆ.

ಚೆನ್ನೈನ ಇಬ್ಬರು ಗ್ರ್ಯಾಂಡ್‌ಮಾಸ್ಟರ್‌ಗಳಾದ ವಿ. ಪ್ರಣವ್ ಮತ್ತು ಕಾರ್ತಿಕೇಯನ್ ಮುರಳಿ ನಡುವಣ ಬಹುನಿರೀಕ್ಷಿತ ಸೆಣಸಾಟ ‘ಡ್ರಾ’ದಲ್ಲಿ ಕೊನೆಗೊಂಡಿತು. ನೆದರ್ಲೆಂಡ್ಸ್‌ನ ಅನುಭವಿ ಆಟಗಾರ ಅನಿಶ್‌ ಗಿರಿ ಮತ್ತು ಅಮೆರಿಕದ ಜಿಎಂ ರೇ ರಾಬ್ಸನ್‌ ನಡುವಣ ಪಂದ್ಯವೂ ಡ್ರಾ ಆಯಿತು.

ADVERTISEMENT

ಭಾರತದ ಗ್ರ್ಯಾಂಡ್‌ಮಾಸ್ಟರ್ ವಿದಿತ್ ಗುಜರಾತಿ ಅವರು ಡಚ್‌ ಆಟಗಾರ ಜೋರ್ಡನ್‌ ವಾನ್‌ ಫೋರಿಸ್ಟ್ ಜೊತೆ ಪಾಯಿಂಟ್‌ ಹಂಚಿಕೊಂಡರು. 


ಚಾಲೆಂಜರ್ ವಿಭಾಗದಲ್ಲಿ ಅಗ್ರ ಆಟಗಾರರಾದ ದೀಪ್ತಾಯನ ಘೋಷ್‌, ಲಿಯಾನ್ ಲ್ಯೂಕ್ ಮೆಂಡೋನ್ಸಾ ಮತ್ತು ಎಂ.ಪ್ರಾಣೇಶ್‌ ತಮ್ಮ ಮೊದಲ ಪಂದ್ಯಗಳಲ್ಲಿ ಜಯಗಳಿಸಿದರು. ದೀಪ್ತಾಯನ ಘೋಷ್‌, ಡಿ.ಹಾರಿಕಾ ವಿರುದ್ಧ, ಮೆಂಡೋನ್ಸಾ, ಹರ್ಷವರ್ಧನ್ ಜಿ.ಬಿ. ವಿರುದ್ಧ ಗೆಲುವು ದಾಖಲಿಸಿದರು. 

ಗ್ರ್ಯಾಂಡ್‌ಮಾಸ್ಟರ್‌ ಆರ್‌.ವೈಶಾಲಿ, ಪಾ.ಇನಿಯನ್ ಜೊತೆ, ಅಧಿಬನ್ ಭಾಸ್ಕರನ್‌, ಅಭಿಮನ್ಯು ಪುರಾಣಿಕ್ ಜೊತೆ ಪಂದ್ಯಗಳನ್ನು ಡ್ರಾ ಮಾಡಿಕೊಂಡರು.

Arjun Erigaisi

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.