ADVERTISEMENT

ಹಾಕಿ: ವರುಣ್‌ ಬದಲಿಗೆ ಲಾಕ್ರಾ

ಎಫ್‌ಐಎಚ್‌ ಒಲಿಂಪಿಕ್ ಕ್ವಾಲಿಫೈಯರ್ಸ್‌ ಪಂದ್ಯ

ಪಿಟಿಐ
Published 30 ಅಕ್ಟೋಬರ್ 2019, 20:12 IST
Last Updated 30 ಅಕ್ಟೋಬರ್ 2019, 20:12 IST
ಬೀರೇಂದ್ರ ಲಾಕ್ರಾ
ಬೀರೇಂದ್ರ ಲಾಕ್ರಾ   

ಭುವನೇಶ್ವರ : ರಷ್ಯಾ ವಿರುದ್ಧದ ಎಫ್‌ಐಎಚ್‌ ಒಲಿಂಪಿಕ್‌ ಕ್ವಾಲಿಫೈಯರ್ಸ್‌ ಪಂದ್ಯಗಳಿಂದ ಭಾರತದ ಡ್ರ್ಯಾಗ್‌ಫ್ಲಿಕರ್‌ ವರುಣ್‌ ಕುಮಾರ್‌ ಹೊರಗುಳಿದಿದ್ದಾರೆ. ಭುಜದ ನೋವಿನಿಂದ ಬಳಲುತ್ತಿರುವ ಅವರ ಬದಲಿಗೆ ಡಿಫೆಂಡರ್‌ ಬೀರೇಂದ್ರ ಲಾಕ್ರಾ ಸ್ಥಾನ ಪಡೆದಿದ್ದಾರೆ.

ಭಾರತ ತಂಡ ಇಲ್ಲಿಯ ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ನವೆಂಬರ್‌ 1 ಹಾಗೂ 2ರಂದು ರಷ್ಯಾ ವಿರುದ್ಧ ಎರಡು ಪಂದ್ಯಗಳನ್ನು ಆಡಲಿದೆ. ತಂಡದಲ್ಲಿನ ಬದಲಾವಣೆಯನ್ನು ಹಾಕಿ ಇಂಡಿಯಾ ಬುಧವಾರ ಘೋಷಿಸಿದೆ.

ಸೋಮವಾರ ತರಬೇತಿ ಸಂದರ್ಭದಲ್ಲಿ ವರುಣ್‌ಕುಮಾರ್‌ ಗಾಯಗೊಂಡಿದ್ದಾರೆ. ಅವರು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಬದಲಿಗೆ 170ಕ್ಕಿಂತ ಅಧಿಕ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಬೀರೇಂದ್ರ ಲಾಕ್ರಾ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ.’ ಎಂದು ಭಾರತ ತಂಡದ ಕೋಚ್‌ ಗ್ರಹಾಂ ರೀಡ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.