ADVERTISEMENT

ಮುಂಬೈ | ಗ್ಲೋಬಲ್ ಚೆಸ್‌ ಲೀಗ್ ಇಂದಿನಿಂದ

ಪಿಟಿಐ
Published 14 ಡಿಸೆಂಬರ್ 2025, 0:48 IST
Last Updated 14 ಡಿಸೆಂಬರ್ 2025, 0:48 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ಮುಂಬೈ: ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ತಂಡವು, ಭಾನುವಾರ ಇಲ್ಲಿ ಆರಂಭವಾಗುವ ಗ್ಲೋಬಲ್ ಚೆಸ್‌ ಲೀಗ್‌ನಲ್ಲಿ (ಜಿಸಿಎಲ್‌) ಹ್ಯಾಟ್ರಿಕ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಮೊದಲೆರಡೂ ಆವೃತ್ತಿಗಳಲ್ಲಿ ಈ ತಂಡ ಚಾಂಪಿಯನ್ ಆಗಿತ್ತು.

ಟೆಕ್‌ ಮಹೀಂದ್ರ ಮತ್ತು ವಿಶ್ವ ಚೆಸ್‌ ಫೆಡರೇಷನ್‌ (ಫಿಡೆ) ಜಂಟಿ ಉಪಕ್ರಮವಾಗಿರುವ ಜಿಸಿಎಲ್‌ನ ಟ್ರೋಫಿಯನ್ನು ಇಲ್ಲಿನ ರಾಯಲ್‌ ಒಪೇರಾ ಹೌಸ್‌ನಲ್ಲಿ ಶನಿವಾರ ಅನಾವರಣಗೊಳಿಸಲಾಯಿತು. ಈ ಬಾರಿಯೂ ಆರು ತಂಡಗಳು ಕಣಕ್ಕಿಳಿಯಲಿವೆ. ತ್ರಿವೇಣಿ ತಂಡದಲ್ಲಿ ಫ್ರೆಂಚ್‌ ಗ್ರ್ಯಾಂಡ್‌ಮಾಸ್ಟರ್‌ ಅಲಿರೇಝಾ ಫಿರೋಜ್ ನಾಯಕರಾಗಿದ್ದು, ವಿದಿತ್‌ ಗುಜರಾತಿ, ಝು ಝಿನೆರ್ ಅವರನ್ನು ಒಳಗೊಂಡಿದೆ.

ಈ ಟೂರ್ನಿಯಲ್ಲಿ ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್‌ ಜೊತೆಗೆ ಅಪ್‌ಗ್ರಾಡ್‌ ಮುಂಬಾ ಮಾಸ್ಟರ್ಸ್‌, ಗ್ಯಾಂಜೆಸ್‌ ಗ್ರ್ಯಾಂಡ್‌ಮಾಸ್ಟರ್ಸ್‌, ಅಲ್ಪೈನ್‌ ಎಸ್‌ಜಿ ಪೈಪರ್ಸ್‌, ಪಿಬಿಜಿ ಅಲಾಸ್ಕನ್‌ ನೈಟ್ಸ್‌, ಫೈಯರ್ಸ್‌ ಅಮೆರಿಕನ್ ಗ್ಯಾಂಬಿಟ್ಸ್‌ ಭಾಗವಹಿಸುತ್ತಿವೆ. ವಿಶ್ವಖ್ಯಾತ ಆಟಗಾರರು ಈ ತಂಡಗಳಲ್ಲಿದ್ದಾರೆ.

ADVERTISEMENT

10 ದಿನಗಳ ಈ ಲೀಗ್‌, ಡಬಲ್‌ ರೌಂಡ್‌ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಡಿಸೆಂಬರ್ 23ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.