ಲೂಯಿಸ್‌ವಿಲ್ಲೆ: ಕುದುರೆ ರೇಸ್‌ನ ಪರಿಣತ ತರಬೇತುದಾರ ಡಿ.ವೇಯ್ನ್ ಲುಕಾಸ್ (89) ಅವರು ಕೆಂಟುಕಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
‘ರಕ್ತದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರ ಹೃದಯ ಹಾಗೂ ಜೀರ್ಣಾಂಗ ವ್ಯವಸ್ಥೆಗೆ ತೀವ್ರ ಹಾನಿಯಾಗಿತ್ತು. ಭಾನುವಾರ ರಾತ್ರಿ ಅವರು ಕೊನೆಯುಸಿರೆಳೆದರು’ ಎಂದು ಅವರ ಕುಟುಂಬಸ್ಥರು ತಿಳಿಸಿದರು.
ಟ್ರಿಪಲ್ ಕ್ರೌನ್ ರೇಸ್‌ನಲ್ಲಿ ಅವರು 15 ಬಾರಿ ಗೆಲುವು ಪಡೆದಿದ್ದರು. ಅದರಲ್ಲಿಲ ಕೆಂಟುಕಿ ಡರ್ಬಿಯಲ್ಲಿ ನಾಲ್ಕು ಸಲ ಗೆಲುವು ಒಲಿದಿತ್ತು. ಬೀಡರ್ಸ್ ಕಪ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ತಮ್ಮದೇ ದಾಖಲೆ ಬರೆದಿದ್ದರು. ‘ಹಾಲ್ ಆಫ್ ಫೇಮ್’ ಗೌರವಕ್ಕೂ ಅವರು ಭಾಜನರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.