ADVERTISEMENT

ಜೂನಿಯರ್‌ ಹಾಕಿ ವಿಶ್ವಕಪ್‌: ಪ್ರೇಕ್ಷಕರಿಗೆ ಟಿಕೆಟ್‌ ಉಚಿತ

ಪಿಟಿಐ
Published 23 ನವೆಂಬರ್ 2025, 20:06 IST
Last Updated 23 ನವೆಂಬರ್ 2025, 20:06 IST
   

ಮದುರೈ: ತಮಿಳುನಾಡಿನಲ್ಲಿ ಇದೇ ಶುಕ್ರವಾರದಿಂದ (ನವೆಂಬರ್‌ 28) ಡಿಸೆಂಬರ್‌ 10ರ ವರೆಗೆ ನಡೆಯಲಿರುವ ಜೂನಿಯರ್‌ ಹಾಕಿ ವಿಶ್ವಕಪ್‌ ಟೂರ್ನಿಯಲ್ಲಿ ಪ್ರೇಕ್ಷಕರಿಗೆ ಉಚಿತ ಪ್ರವೇಶ ನೀಡಲಾಗುತ್ತದೆ.

‘ಉಚಿತ ಟಿಕೆಟ್‌ಗಳನ್ನು ಹಂಚುವ ಮೂಲಕ ವಿದ್ಯಾರ್ಥಿಗಳು, ಯುವ ಅಥ್ಲೀಟ್‌ಗಳು, ಹಾಕಿ ಅಭಿಮಾನಿಗಳು ಹಾಗೂ ಆಟಗಾರರ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯ ವೀಕ್ಷಿಸಲು ಅವಕಾಶ ಮಾಡಿಕೊಡುವುದು ನಮ್ಮ ಉದ್ದೇಶ’ ಎಂದು ‘ಹಾಕಿ ಇಂಡಿಯಾ’ ಅಧ್ಯಕ್ಷ ದಿಲೀಪ್‌ ಟಿರ್ಕಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಆಸಕ್ತರು ಟಿಕೆಟ್‌ಜೀನಿ ವೆಬ್‌ಸೈಟ್‌ ಅಥವಾ ಹಾಕಿ ಇಂಡಿಯಾ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಉಚಿತ ವರ್ಚುವಲ್‌ ಟಿಕೆಟ್‌ಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ADVERTISEMENT

ತಮಿಳುನಾಡಿನ ಮದುರೈ ಮತ್ತು ಚೆನ್ನೈ ನಗರಗಳು ಆತಿಥ್ಯ ವಹಿಸುತ್ತಿದ್ದು, ಒಟ್ಟು 24 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.