ADVERTISEMENT

ಹಾಕಿ: ಆಯ್ಕೆ ಟ್ರಯಲ್ಸ್ ಜುಲೈ 16ರಂದು

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 14:53 IST
Last Updated 12 ಜುಲೈ 2025, 14:53 IST
ಹಾಕಿ
ಹಾಕಿ   

ಬೆಂಗಳೂರು: ಹಾಕಿ ಕರ್ನಾಟಕದ ಆಶ್ರಯದಲ್ಲಿ ಪುರುಷರ ವಿಭಾಗದ ರಾಜ್ಯ ಸಬ್‌ ಜೂನಿಯರ್ ತಂಡದ ಆಯ್ಕೆ ಟ್ರಯಲ್ಸ್‌ ಇದೇ 16ರಂದು ನಡೆಯಲಿದೆ. ಶಾಂತಿನಗರದ ಎಫ್‌ಎಂಕೆಎಂಸಿ ಹಾಕಿ ಕ್ರೀಡಾಂಗಣದಲ್ಲಿ ಆ ದಿನ ಬೆಳಿಗ್ಗೆ 9.30ಕ್ಕೆ ಟ್ರಯಲ್ಸ್ ಆರಂಭವಾಗಲಿದೆ. 2009ರ ಜನವರಿ 1 ಅಥವಾ  ಅದರ ನಂತರ ಜನಿಸಿದ ಆಟಗಾರರು ಈ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. 

ಈ ತಂಡವು ಜುಲೈ 28ರಿಂದ ಆಗಸ್ಟ್ 8ರವರೆಗೆ ಚೆನ್ನೈನಲ್ಲಿ ನಡೆಯಲಿರುವ 15ನೇ ಹಾಕಿ ಇಂಡಿಯಾ ಸಬ್‌ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ  ಆಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT