ADVERTISEMENT

ಹಾಕಿ | ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ಮೊದಲ ಎದುರಾಳಿ

ಪಿಟಿಐ
Published 17 ಜುಲೈ 2020, 21:08 IST
Last Updated 17 ಜುಲೈ 2020, 21:08 IST
   

ಲಾಸೇನ್: ಮುಂದಿನ ವರ್ಷಕ್ಕೆ ಮುಂದೂಡಲಾಗಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡವು ನ್ಯೂಜಿಲೆಂಡ್ ಎದುರು ಮೊದಲ ಪಂದ್ಯ ಆಡಲಿದೆ. ಮಹಿಳಾ ತಂಡ ನೆದರ್ಲೆಂಡ್ಸ್‌ಗೆ ಆರಂಭಿಕ ಸವಾಲು ಎಸೆಯಲಿದೆ.

ನಾಲ್ಕು ದಶಕಗಳಿಂದ ಪದಕದ ಬರ ಎದುರಿಸುತ್ತಿರುವ ಭಾರತ ತಂಡ ಮೊದಲ ಪಂದ್ಯವನ್ನು ಜುಲೈ 24ರಂದು ಆಡಲಿದೆ. ಅದೇ ದಿನ ಮಹಿಳೆಯರ ತಂಡದ ಮೊದಲ ಪಂದ್ಯವೂ ನಡೆಯಲಿದೆ. ಹಾಕಿ ಪಂದ್ಯಗಳ ವೇಳಾಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.

ಒಲಿಂಪಿಕ್ಸ್‌ನಲ್ಲಿ ಎಂಟು ಬಾರಿ ಚಾಂಪಿಯನ್ ಆಗಿದ್ದ ಭಾರತ ತಂಡ ಈ ಬಾರಿ ‘ಎ‘ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.