ADVERTISEMENT

ಹಾಕಿ ವಿಶ್ವಕಪ್‌: ಭಾರತಕ್ಕೆ ಬಂದ ಜರ್ಮನಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2018, 19:45 IST
Last Updated 25 ನವೆಂಬರ್ 2018, 19:45 IST

ಭುವನೇಶ್ವರ (ಪಿಟಿಐ): ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಜರ್ಮನಿ, ಕೆನಡಾ ಮತ್ತು ಐರ್ಲೆಂಡ್‌ ತಂಡಗಳು ಭಾನುವಾರ ಭಾರತಕ್ಕೆ ಬಂದಿವೆ.

ಜರ್ಮನಿ ತಂಡ ‘ಡಿ’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಪಾಕಿಸ್ತಾನ, ಮಲೇಷ್ಯಾ ಮತ್ತು ನೆದರ್ಲೆಂಡ್ಸ್‌ ತಂಡಗಳೂ ಇದೇ ಗುಂಪಿನಲ್ಲಿವೆ. ಡಿಸೆಂಬರ್‌ 1ರಂದು ಕಳಿಂಗ ಕ್ರೀಡಾಂಗಣದಲ್ಲಿ ನಡೆಯುವ ಹೋರಾಟದಲ್ಲಿ ಜರ್ಮನಿ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ.

ಐರ್ಲೆಂಡ್‌ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಹೊಂದಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ಚೀನಾ ತಂಡಗಳೂ ಇದೇ ಗುಂಪಿನಲ್ಲಿ ಆಡಲಿವೆ.

ADVERTISEMENT

ಐರ್ಲೆಂಡ್‌ ತಂಡ ತನ್ನ ಮೊದಲ ಹೋರಾಟದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ಎದುರು ಸೆಣಸಲಿದೆ. ಈ ಪಂದ್ಯ ನವೆಂಬರ್‌ 30ರಂದು ನಿಗದಿಯಾಗಿದೆ.

ಕೆನಡಾ ತಂಡ ಭಾರತ, ಬೆಲ್ಜಿಯಂ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಜೊತೆ ‘ಸಿ’ ಗುಂಪಿನಲ್ಲಿ ಪೈಪೋಟಿ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.