ಬೆಂಗಳೂರು: ಅಭಿಶ್ರುತ್ ಮತ್ತು ಮೋನಿಶಾ ಎನ್.ಎಸ್. ಅಮೀನ್ ಅವರು ತೆಲಂಗಾಣದ ರಾಮಗುಂಡಂನಲ್ಲಿ ಬುಧವಾರದಿಂದ ಇದೇ 17ರವರೆಗೆ ನಡೆಯುವ ಐಡಿಬಿಎಫ್ ಡಾಡ್ಜ್‌ಬಾಲ್ ಫೆಡರೇಷನ್ ಕಪ್ ಟೂರ್ನಿಯಲ್ಲಿ ಕ್ರಮವಾಗಿ ಕರ್ನಾಟಕದ ಪುರುಷರ ಮತ್ತು ಮಹಿಳೆಯರ ತಂಡವನ್ನು ಮುನ್ನಡೆಸಲಿದ್ದಾರೆ.
ಕರ್ನಾಟಕ ರಾಜ್ಯ ಡಾಡ್ಜ್‌ಬಾಲ್ ಸಂಸ್ಥೆಯು ಆಯ್ಕೆ ಟ್ರಯಲ್ಸ್ ನಡೆಸಿ ತಲಾ 12 ಆಟಗಾರರ ರಾಜ್ಯ ತಂಡವನ್ನು ಪ್ರಕಟಿಸಿದೆ. ಟೂರ್ನಿಯಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ವಿವಿಧ ರಾಜ್ಯಗಳ ತಲಾ 10 ತಂಡಗಳು ಪೈಪೋಟಿ ನಡೆಸಲಿವೆ.
ಪುರುಷರ ತಂಡ: ಅಭಿಶ್ರುತ್ (ನಾಯಕ), ಪ್ರಥಮ್ ಎಸ್. ಗೌಡ (ಉಪನಾಯಕ), ಸಮರ್ಥ್ ಕೆ.ಬಿ, ಸುನಿಲ್ ಕುಮಾರ್ ಕೆ, ನೂತನ್ ಜೆ. ಗೌಡ, ರಣವೀರ್ ರಾಣಾ, ಭರತ್ ವಿ.ಬಿ, ಯಶವಂತ್ ಎನ್.ಎಸ್, ಸೈಯ್ಯದ್ ಮೊಯಿನುದ್ದೀನ್, ವಿಶ್ರುತ್ ಎಸ್, ರವಿ ಕುಮಾರ ಕೆ.ಕೆ, ಸಂದೀಪ. ಸಂಪತ್ ಕುಮಾರ್ (ಕೋಚ್), ರಾಘವೇಂದ್ರ (ಮ್ಯಾನೇಜರ್).
ಮಹಿಳೆಯರ ತಂಡ: ಮೋನಿಶಾ ಎನ್.ಎಸ್. ಅಮೀನ್ (ನಾಯಕಿ), ವಿ. ಪ್ರಗತಿ (ಉಪನಾಯಕಿ), ಖುಷ್ಬು ಎಸ್, ಸ್ವರಾ ಪಿ.ಎಸ್, ವರ್ಷಾ ರಾಜ್, ವರ್ಷಿತಾ ಎನ್, ಲೀಶಾ ಡಿ. ಚವಾಣ್, ವಂದನಾ ಪಿ. ಗೌಡ, ನೇಹಾ ಕುಮಾರಿ ಎಂ.ಆರ್, ಅಯಲ್ ರಚಿತಾ, ನೇಹಾ ಕುಮಾರಿ ಎಸ್.ಎಂ, ಎಚ್.ಎನ್. ತನುಶ್ರೀ. ಗೀತಾ (ಕೋಚ್), ಭೂಮಿಕಾ (ಮ್ಯಾನೇಜರ್).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.