ಈಂಡ್‌ಹೋವೆನ್ (ನೆದರ್ಲೆಂಡ್ಸ್),: ಭಾರತ ಪುರುಷರ ಹಾಕಿ ‘ಎ’ ತಂಡ, ಯುರೋಪ್ ಪ್ರವಾಸದಲ್ಲಿ ಸತತ ಮೂರನೇ ಗೆಲುವು ಪಡೆಯಿತು. ಶನಿವಾರ ನಡೆದ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 3–2 ಗೋಲುಗಳಿಂದ ಸೋಲಿಸಿತು.
ಭಾರತದ ಪರ ಮುನ್ಪಡೆ ಆಟಗಾರ ಆದಿತ್ಯ ಅರ್ಜುನ್ ಲಾಲಗೆ ಎರಡು ಗೋಲು ಗಳಿಸಿದರೆ, ಬಾಬಿ ಸಿಂಗ್ ಧಾಮಿ ಮತ್ತೊಂದು ಗೋಲು ಗಳಿಸಿದರು. ಕ್ಲೆಮೆಂಟ್ ಅವರು ಫ್ರಾನ್ಸ್‌ನ ಎರಡೂ ಗೋಲುಗಳನ್ನು ಗಳಿಸಿದರು.
ಭಾರತ ‘ಎ’ ತಂಡವು ಭಾನುವಾರ ಮತ್ತೊಮ್ಮೆ ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಇದರ ನಂತರ ಒಟ್ಟು ನಾಲ್ಕು ಪಂದ್ಯಗಳನ್ನು ಆಡಲಿದೆ. ಆತಿಥೇಯ ನೆದರ್ಲೆಂಡ್ಸ್ ವಿರುದ್ಧ ಎರಡು ಪಂದ್ಯಗಳನ್ನು, ಇಂಗ್ಲೆಂಡ್ ಮತ್ತು ಬೆಲ್ಜಿಯಂ ವಿರುದ್ಧ ತಲಾ ಒಂದು ಪಂದ್ಯ ಆಡಲಿದೆ.
ಭಾರತ ತಂಡ ಪ್ರವಾಸದ ಮೊದಲ ಎರಡು ಪಂದ್ಯಗಳಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಿತ್ತು.
‘ಈ ಪ್ರವಾಸಕ್ಕೆ ತಂಡ ಸಾಕಷ್ಟು ಸಿದ್ಧತೆ ನಡೆಸಿತ್ತು. ಈಗ ಅದು ಕ್ರೀಡಾಂಗಣದಲ್ಲಿ ಪ್ರತಿಫಲನವಾಗುತ್ತಿರುವುದು ಮುದ ನೀಡುತ್ತಿದೆ’ ಎಂದು ತಂಡದ ಕೋಚ್ ಶಿವೇಂದ್ರ ಸಿಂಗ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.