ಸಾಂದರ್ಭಿಕ ಚಿತ್ರ
ಅಮ್ಮಾನ್ (ಜೋರ್ಡಾನ್): ಭಾರತದ ಇನ್ನೂ ನಾಲ್ವರು ಬಾಕ್ಸರ್‌ಗಳು, ಏಷ್ಯನ್ 15 ಮತ್ತು 17 ವರ್ಷದೊಳಗಿವನರ ಬಾಕ್ಸಿಂಗ್ ಚಾಂಪಿಯನ್‌ಷಿಪ್ಸ್‌ನ ಸೆಮಿಫೈನಲ್‌ಗೆ ಅರ್ಹತೆ ಪಡೆದರು. ಇದರೊಂದಿಗೆ, ಇದೇ ಮೊದಲ ಬಾರಿ ನಡೆಯುತ್ತಿರುವ ಈ ಕೂಟದಲ್ಲಿ ಭಾರತಕ್ಕೆ 43 ಪದಕಗಳು ಖಾತರಿಯಾಗಿವೆ.
ಸೆಮಿಫೈನಲ್ ತಲುಪುವ ಎಲ್ಲ ಸ್ಪರ್ಧಿಗಳಿಗೆ ಪದಕಗಳು ಖಾತರಿಯಾಗಿದೆ. ಹೀಗಾಗಿ 15 ವರ್ಷದೊಳಗಿನವರ ವಿಭಾಗದಲ್ಲಿ ಕನಿಷ್ಠ 25 ಪದಕಗಳು ಮತ್ತು 7 ವರ್ಷದೊಳಗಿನವರ ವಿಭಾಗದಲ್ಲಿ 18 ಪದಕಗಳನ್ನು ಭಾರತ ಗೆಲುವುದು ಖಚಿತವಾಗಲಿವೆ.
ಅಮನ್ ಸಿವಾಚ್ (63 ಕೆ.ಜಿ) ಮತ್ತು ದೇವಾಂಶ್ (80 ಕೆ.ಜಿ) ಅವರು 17 ವರ್ಷದೊಳಗಿನವರ ಬಾಲಕರ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಕ್ರಮವಾಗಿ ಫಿಲಿಪೀನ್ಸ್ ಮತ್ತು ಜೋರ್ಡಾನ್ ಎದುರಾಳಿಗಳನ್ನು ಸೋಲಿಸಿ ಅಂತಿಮ ನಾಲ್ಕರ ಘಟ್ಟ ತಲುಪಿದರು. ಆರ್‌ಎಸ್‌ಸಿ (ರೆಫ್ರಿ ಸ್ಟಾಪ್ಸ್ ಕಂಟೆಸ್ಟ್) ಆಧಾರದಲ್ಲಿ ಭಾರತದ ಬಾಕ್ಸರ್‌ಗಳು ಜಯಗಳಿಸಿದರು.
ಬಾಲಕಿಯರ ವಿಭಾಗದಲ್ಲಿ ಸಿಮ್ರಣ್‌ಜಿತ್ ಕೌರ್ (60 ಕೆ.ಜಿ) ಅವರು 5–0 ಯಿಂದ ಜೋರ್ಡನ್‌ನ ಅಯಾ ಅಲ್ಹಾಸನತ್ ವಿರುದ್ಧ, ಹಿಮಾಂಶಿ (70 ಕೆ.ಜಿ ವಿಭಾಗ) ಅವರು ಆರ್‌ಎಸ್‌ಸಿ ಆಧಾರದ ಮೇಲೆ ಪ್ಯಾಲಸ್ತೀನಿನ ಫರಾ ಅಬು ಲಾಯ್ಲ ವಿರುದ್ಧ ಜಯಗಳಿಸಿ ಸೆಮಿಫೈನಲ್ ತಲುಪಿದರು.
17 ವರ್ಷದಗೊಳಗಿನ ಬಾಲಕರ ವಿಭಾಗದಲ್ಲಿ ಅನಂತ ಗೌರಿಶಂಕರ ದೇಶಮುಖ್ ಮತ್ತು ಪ್ರಿಯಾಂಶ್ ಸೆಹರಾವತ್ ಅವರು ಕ್ರಮವಾಗಿ ಡೇನಿಯಲ್ ಶಾಲ್ಕರ್‌ಬಾಯ್ (ಕಜಕಸ್ತಾನ) ಮತ್ತು ಖುರ್ಷಿದ್‌ಬೆಕ್ ಜುರಯೇವ್ (ಉಜ್ಬೇಕಿಸ್ತಾನ) ಅವರನ್ನು ಪಾಯಿಂಟ್ಸ್ ಆಧಾರದಲ್ಲಿ ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.