ADVERTISEMENT

ಪೂರ್ವಭಾವಿ ಪಂದ್ಯ ಆಡಲಿರುವ ಭಾರತ ಜೂನಿಯರ್‌ ಮಹಿಳಾ ಹಾಕಿ ತಂಡ

ಪಿಟಿಐ
Published 7 ಜೂನ್ 2025, 14:44 IST
Last Updated 7 ಜೂನ್ 2025, 14:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತ ಜೂನಿಯರ್‌ ಮಹಿಳಾ ಹಾಕಿ ತಂಡವು, ಎಫ್‌ಐಎಚ್‌ ಜೂನಿಯರ್‌ ಮಹಿಳಾ ವಿಶ್ವಕಪ್‌ ಟೂರ್ನಿಗೆ ಪೂರ್ವಭಾವಿಯಾಗಿ ಯುರೋಪ್‌ನಲ್ಲಿ ಐದು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ಬೆಲ್ಜಿಯಂ ವಿರುದ್ಧ ಮೂರು, ಆಸ್ಟ್ರೇಲಿಯಾ ಹಾಗೂ ನೆದರ್ಲೆಂಡ್ಸ್‌ ವಿರುದ್ಧ ತಲಾ ಒಂದು ಪಂದ್ಯಗಳನ್ನು ಆಡಲಿದೆ. ಜೂನ್‌ 8ರಿಂದ (ಭಾನುವಾರ) 17ರ ವರೆಗೆ ಈ ಪಂದ್ಯಗಳು ನಡೆಯಲಿವೆ.

ಅರ್ಜೆಂಟೀನಾದ ರೊಸಾರಿಯೊದಲ್ಲಿ ಇತ್ತೀಚೆಗೆ ಈ ತಂಡ ನಾಲ್ಕು ರಾಷ್ಟ್ರಗಳ ಟೂರ್ನಿಯಲ್ಲಿ ಆಡಿ ಉತ್ತಮ ಭರವಸೆಯ ಪ್ರದರ್ಶನ ನೀಡಿತ್ತು.

ADVERTISEMENT

‘ತವರಿನಾಚೆ, ಬಲಿಷ್ಠ ತಂಡಗಳ ಎದುರು ಪಂದ್ಯಗಳನ್ನು ಆಡುವುದು ತಂಡದ ಸಂಯೋಜನೆಗೆ ಸಹಕಾರಿಯಾಗಲಿದೆ. ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಆಟಗಾರ್ತಿಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದೆ’ ಎಂದು ಕೋಚ್‌ ತುಷಾರ್‌ ಖಾಂಡ್ಕರ್‌ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಎಫ್‌ಐಎಚ್‌ ಜೂನಿಯರ್‌ ಮಹಿಳಾ ಹಾಕಿ ವಿಶ್ವಕಪ್‌ ಟೂರ್ನಿಯು, ಚಿಲಿಯ ಸ್ಯಾಂಟಿಯಾಗೊದಲ್ಲಿ ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.