ADVERTISEMENT

ಜೋಹರ್ ಕಪ್ ಹಾಕಿ ಟೂರ್ನಿ: ಭಾರತ–ಬ್ರಿಟನ್ ಪಂದ್ಯ ಡ್ರಾ

ಪಿಟಿಐ
Published 28 ಅಕ್ಟೋಬರ್ 2022, 12:20 IST
Last Updated 28 ಅಕ್ಟೋಬರ್ 2022, 12:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೋಹರ್‌, ಮಲೇಷ್ಯಾ: ಭಾರತ ಜೂನಿಯರ್ ಪುರುಷರ ಹಾಕಿ ತಂಡವು ಜೋಹರ್ ಕಪ್ ಹಾಕಿ ಟೂರ್ನಿಯಲ್ಲಿ ಮಲೇಷ್ಯಾ ಎದುರು ರೋಚಕ ಡ್ರಾ ಸಾಧಿಸಿತು.

ಇಲ್ಲಿ ಟೂರ್ನಿಯುತ್ತಿರುವ ಟೂರ್ನಿಯ ರೌಂಡ್‌ ರಾಬಿನ್ ಮಾದರಿಯ ಕೊನೆಯ ಪಂದ್ಯವು 5–5ರಿಂದ ಸಮಬಲದಲ್ಲಿ ಅಂತ್ಯವಾಯಿತು. ಇದರೊಂದಿಗೆ ಭಾರತವು ಫೈನಲ್‌ಗೆ ಅರ್ಹತೆ ಪಡೆಯುವ ಸ್ಪರ್ಧೆಯಲ್ಲಿ ಉಳಿದುಕೊಂಡಿತು.

ಭಾರತ ತಂಡಕ್ಕಾಗಿ ಪೂವಣ್ಣ ಸಿ.ಬಿ. (7ನೇ ನಿಮಿಷ), ಅಮನ್‌ದೀಪ (50ನೇ ನಿ.), ಅರೈಜೀತ್ ಸಿಂಗ್‌ ಹುಂಡಲ್‌ (53ನೇ ನಿ.), ಶಾರದಾ ನಂದ ತಿವಾರಿ (56 ಮತ್ತು 58ನೇ ನಿಮಿಷ) ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.

ADVERTISEMENT

ಬ್ರಿಟನ್ ತಂಡದ ಪರ ಮ್ಯಾಕ್ಸ್ ಆ್ಯಂಡರ್ಸನ್‌ (1, 40ನೇ ನಿ.) ಮತ್ತು ಜೆಮಿ ಗೋಲ್ಡನ್‌ (54, 56ನೇ ನಿ.) ತಲಾ ಎರಡು ಗೋಲು ಗಳಿಸಿದರು. ಹ್ಯಾರಿಸ್‌ ಸ್ಟೋನ್‌ (42ನೇ ನಿ.) ಕೊಡುಗೆ ನೀಡಿದರು.

ಲೀಗ್ ಹಂತದಲ್ಲಿ ಭಾರತ ತಂಡವು ಐದು ಪಂದ್ಯಗಳಲ್ಲಿ ಎಂಟು ಪಾಯಿಂಟ್ಸ್ ಗಳಿಸಿ ಎರಡನೇ ಸ್ಥಾನ ಗಳಿಸಿತು. ಆಸ್ಟ್ರೇಲಿಯಾ (ಈಗಾಗಲೇ ಫೈನಲ್‌ಗೆ ಅರ್ಹತೆ ಪಡೆದಿದೆ) ನಾಲ್ಕು ಪಂದ್ಯಗಳಿಂದ 10 ಪಾಯಿಂಟ್ಸ್ ಕಲೆಹಾಕಿ ಮೊದಲ ಸ್ಥಾನದಲ್ಲಿದೆ.

ಹಾಲಿ ಚಾಂಪಿಯನ್ ಬ್ರಿಟನ್‌ ತಂಡವು ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.