ADVERTISEMENT

ಕೃಣಾಲ್‌-ಕೆಎಲ್‌ ಬಿರುಸಿನ ಬ್ಯಾಟಿಂಗ್;‌ ಇಂಗ್ಲೆಂಡ್‌ ಗೆಲುವಿ‌ಗೆ 318 ರನ್‌ ಗುರಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 12:27 IST
Last Updated 23 ಮಾರ್ಚ್ 2021, 12:27 IST
ರನ್‌ಗಾಗಿ ಓಡುತ್ತಿರುವ ಕೃಣಾಲ್‌ ಪಾಂಡ್ಯ ಮತ್ತು ಕೆಎಲ್‌ ರಾಹುಲ್‌ (ಬಲ)
ರನ್‌ಗಾಗಿ ಓಡುತ್ತಿರುವ ಕೃಣಾಲ್‌ ಪಾಂಡ್ಯ ಮತ್ತು ಕೆಎಲ್‌ ರಾಹುಲ್‌ (ಬಲ)   

ಪುಣೆ: ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ನಿಗದಿತ50 ಓವರ್‌ಗಳಲ್ಲಿ5 ವಿಕೆಟ್‌ ಕಳೆದುಕೊಂಡು318 ರನ್‌ ಕಲೆ ಹಾಕಿದೆ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತಕ್ಕೆ ಆರಂಭಿಕರಾದ ಉಪನಾಯಕ ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌ ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ15.1 ಓವರ್‌ಗಳಲ್ಲಿ 64 ರನ್‌ಗಳ ಜೊತೆಯಾಟವಾಡಿತು.

ರೋಹಿತ್‌ (28) ವಿಕೆಟ್‌ ಪತನದ ಬಳಿಕಕ್ರೀಸ್‌ಗೆ ಬಂದ ನಾಯಕ ವಿರಾಟ್‌ ಕೊಹ್ಲಿ (56) ಶಿಖರ್‌ ಜೊತೆಗೂಡಿ ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ105 ರನ್‌ ಸೇರಿಸಿದರು.106 ಎಸೆತಗಳನ್ನು ಎದುರಿಸಿದ ಧವನ್‌,98 ರನ್‌ ಗಳಿಸಿದ್ದಾಗ ಬೆನ್‌ ಸ್ಟೋಕ್ಸ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿ ನಿರಾಸೆ ಅನುಭವಿಸಿದರು.

ADVERTISEMENT

ರನ್‌ ಗತಿ ಏರಿಸಿದ ಕೃಣಾಲ್‌-ಕೆಎಲ್‌
ಅಗ್ರ ಕ್ರಮಾಂಕದಐದು ವಿಕೆಟ್‌ಗಳು ತಂಡದ ಮೊತ್ತ 206 ರನ್‌ ಆಗುವಷ್ಟರಲ್ಲಿ ಉರುಳಿದ್ದವು. 41ನೇ ಓವರ್‌ನಲ್ಲಿ ಜೊತೆಯಾದ ಕನ್ನಡಿಗ ಕೆ.ಎಲ್.‌ ರಾಹುಲ್‌ ಮತ್ತು ಪದಾರ್ಪಣೆ ಪಂದ್ಯವಾಡುತ್ತಿರುವ ಕೃಣಾಲ್‌ ಪಾಂಡ್ಯ ರನ್‌ ಗತಿ ಹೆಚ್ಚಿಸಿದರು. ಟಿ20 ಶೈಲಿಯಲ್ಲಿ ಬ್ಯಾಟಿಂಗ್‌ ಮಾಡಿದ ಈ ಜೋಡಿ ಮುರಿಯದ6ನೇ ವಿಕೆಟ್‌ ಪಾಲುದಾರಿಕೆಯಲ್ಲಿ ಕೇವಲ57 ಎಸೆತಗಳಲ್ಲಿ 112 ರನ್‌ ಗಳಿಸಿತು. ಹೀಗಾಗಿ ತಂಡದ ಮೊತ್ತ 310ರ ಗಡಿ ದಾಟಿತು.

ರಾಹುಲ್‌43 ಎಸೆತಗಳಲ್ಲಿ ತಲಾ ನಾಲ್ಕು ಸಿಕ್ಸರ್‌ ಮತ್ತು ಬೌಂಡರಿ ಸಹಿತ 62ರನ್‌ ಗಳಿಸಿದರೆ, ಆರಂಭದಿಂದಲೂ ಬಿರುಸಾಗಿ ಬ್ಯಾಟ್‌ ಬೀಸಿದ ಕೃಣಾಲ್‌ 31 ಎಸೆತಗಳಲ್ಲಿ2 ಸಿಕ್ಸರ್‌ ಮತ್ತು 7 ಬೌಂಡರಿ ಸಹಿತ 58 ಚಚ್ಚಿದರು.

ಇಂಗ್ಲೆಂಡ್‌ ಪರ ಬೆನ್ಸ್‌ ಸ್ಟೋಕ್ಸ್‌ ಮೂರು, ಮಾರ್ಕ್‌ ವುಡ್‌ ಎರಡು ವಿಕೆಟ್‌ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.