ADVERTISEMENT

Squash World Cup 2025: ಭಾರತದ ಮುಡಿಗೆ ಸ್ಕ್ವಾಷ್‌ ವಿಶ್ವಕಪ್

ಪಿಟಿಐ
Published 14 ಡಿಸೆಂಬರ್ 2025, 20:58 IST
Last Updated 14 ಡಿಸೆಂಬರ್ 2025, 20:58 IST
<div class="paragraphs"><p>ಟ್ರೋಫಿಯೊಂದಿಗೆ ಭಾರತ ಸ್ಕ್ವಾಷ್ ತಂಡ </p></div>

ಟ್ರೋಫಿಯೊಂದಿಗೆ ಭಾರತ ಸ್ಕ್ವಾಷ್ ತಂಡ

   

 ಚಿತ್ರ: ‘ವಿಶ್ವ ಸ್ಕ್ವಾಷ್‌’

ಚೆನ್ನೈ: ಭಾರತ ಸ್ಕ್ವಾಷ್ ತಂಡವು ಇದೇ ಮೊದಲ ಬಾರಿ ವಿಶ್ವಕಪ್ ಜಯಿಸಿ ಚಾರಿತ್ರಿಕ ಸಾಧನೆ ಮಾಡಿತು. 

ADVERTISEMENT

ಎರಡನೇ ಶ್ರೇಯಾಂಕದ ಭಾರತ ತಂಡವು, ಇಲ್ಲಿನ ಎಕ್ಸ್‌ಪ್ರೆಸ್‌ ಅವೆನ್ಯೂ ಮಾಲ್‌ನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ 3–0ಯಿಂದ ಹಾಂಗ್‌ಕಾಂಗ್‌ ತಂಡದ ವಿರುದ್ಧ ಗೆಲುವು ಸಾಧಿಸಿತು.

2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ಕೂಟದಲ್ಲಿ ಮೊದಲ ಬಾರಿಗೆ ಸ್ಕ್ವಾಷ್‌ ಕ್ರೀಡೆಯನ್ನು ಸೇರ್ಪಡೆಗೊಳಿಸಲಾಗಿದೆ. 2023ರ ಆವೃತ್ತಿಯ ವಿಶ್ವಕಪ್‌ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದ್ದು ಭಾರತ ತಂಡದ ಈವರೆಗಿನ ಉತ್ತಮ ಸಾಧನೆಯಾಗಿತ್ತು. 

ಫೈನಲ್‌ನಲ್ಲಿ ಅನುಭವಿ ಆಟಗಾರ್ತಿ ಜೋಷ್ನಾ ಚಿನ್ನಪ್ಪ 3-1 (7-3, 2-7, 7-5, 7-1) ರಿಂದ ಮಹಿಳೆಯರ ಸಿಂಗಲ್ಸ್‌ನಲ್ಲಿ ಲೀ ಕಾ ಯೀ ವಿರುದ್ಧ ಗೆದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಏಷ್ಯನ್ ಗೇಮ್ಸ್ ಪದಕವಿಜೇತ ಅಭಯ್ ಸಿಂಗ್ 3-0 (7-1, 7-4, 7-4) ಅಲೆಕ್ಸ್‌ ಲಾವು ವಿರುದ್ಧ ಗೆದ್ದರು. ಮಹಿಳೆಯರ ಇನ್ನೊಂದು ಸಿಂಗಲ್ಸ್‌ನಲ್ಲಿ 17 ವರ್ಷದ ಅನಾಹತ್ ಸಿಂಗ್ ಅವರು 3-0 (7-2, 7-2, 7-5) ರಿಂದ 31ನೇ ರ‍್ಯಾಂಕ್‌ನ ಟೊಮಾಟೊ ಹೊ ವಿರುದ್ಧ ಗೆದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.