ADVERTISEMENT

ವಿಶ್ವ ಬಾಕ್ಸಿಂಗ್ ಕಪ್‌: ಸೆಮಿಗೆ ಜಾದುಮಣಿ ಸಿಂಗ್

ಪಿಟಿಐ
Published 2 ಏಪ್ರಿಲ್ 2025, 14:39 IST
Last Updated 2 ಏಪ್ರಿಲ್ 2025, 14:39 IST
<div class="paragraphs"><p>ಭಾರತದ ಜಾದುಮಣಿ ಸಿಂಗ್ –ಎಕ್ಸ್‌ ಚಿತ್ರ</p></div>

ಭಾರತದ ಜಾದುಮಣಿ ಸಿಂಗ್ –ಎಕ್ಸ್‌ ಚಿತ್ರ

   

ನವದೆಹಲಿ: ಭಾರತದ ಜಾದುಮಣಿ ಸಿಂಗ್ ಮಂಡೇಂಗ್‌ಬಮ್ ಅವರು ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಕಪ್‌ನ  50 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದರು. ಆದರೆ, ಭಾರತದ ಇತರ ಮೂವರು ಬಾಕ್ಸರ್‌ಗಳು ಆರಂಭಿಕ ಸುತ್ತಿನಲ್ಲೇ ಹೊರಬಿದ್ದರು.

ಹಾಲಿ ರಾಷ್ಟ್ರೀಯ ಚಾಂಪಿಯನ್ 20 ವರ್ಷ ವಯಸ್ಸಿನ ಜಾದುಮಣಿ ಅವರು ಮಂಗಳವಾರ ತಡರಾತ್ರಿ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ 3-2 ಅಂತರದಿಂದ ಕಳೆದ ಆವೃತ್ತಿಯ ಬೆಳ್ಳಿ ಪದಕ ವಿಜೇತ ಬ್ರಿಟನ್‌ನ ಎಲಿಸ್ ಟ್ರೋಬ್ರಿಡ್ಜ್ ಅವರನ್ನು ಮಣಿಸಿದರು. ಭಾರತದ ಬಾಕ್ಸರ್‌ ಸೆಮಿಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಅಸಿಲ್ಬೆಕ್ ಜಲಿಲೋವ್ ಅವರನ್ನು ಎದುರಿಸಲಿದ್ದಾರೆ.

ADVERTISEMENT

ಏಷ್ಯನ್ ಕ್ರೀಡಾಕೂಟದ ಪದಕ ವಿಜೇತ ನರೇಂದರ್ ಬೆರ್ವಾಲ್ (90+ ಕೆ.ಜಿ), ನಿಖಿಲ್ ದುಬೆ (75 ಕೆ.ಜಿ), ಮತ್ತು ಜುಗ್ನೂ (85 ಕೆ.ಜಿ) ನಿರಾಸೆ ಮೂಡಿಸಿದರು. 

2023ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ನರೇಂದರ್ 2–3ರಿಂದ ಕಜಕಿಸ್ತಾನನ ಸಪರ್ಬೆ ಡೇನಿಯಲ್ ವಿರುದ್ಧ ಪರಾಭವಗೊಂಡರು. ನಿಖಿಲ್‌ 0–5ರಿಂದ ಸ್ಥಳೀಯ ಬಾಕ್ಸರ್‌ ಕೌ ಬೆಲಿನಿ ಅವರಿಗೆ ಶರಣಾದರು. ಜುಗ್ನೂ 1–4ರಿಂದ ಫ್ರಾನ್ಸ್‌ನ ಅಬ್ದುಲ್ಲಾಯೆ ಟ್ರೋರೆ ವಿರುದ್ಧ ಮುಗ್ಗರಿಸಿದರು.

ಟೂರ್ನಿಯಲ್ಲಿ ಭಾರತದ 10 ಬಾಕ್ಸರ್‌ಗಳು ಕಣಕ್ಕೆ ಇಳಿದಿದ್ದಾರೆ. 80 ಕೆ.ಜಿ ವಿಭಾಗದಲ್ಲಿ ಲಕ್ಷ್ಯ ಚಾಹರ್‌ ಮೊದಲ ದಿನವೇ ನಿರ್ಗಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.