ಬರ್ಲಿನ್: ಭಾರತ ತಂಡವು ವಿಶ್ವ ಬೇಸಿಗೆ ಕ್ರೀಡಾಕೂಟದ ವಿಶೇಷ ಒಲಿಂಪಿಕ್ಸ್‌ನಲ್ಲಿ 55 ಪದಕಗಳನ್ನು ಜಯಿಸಿತು.
ಭಾರತ ತಂಡವು ಅಥ್ಲೆಟಿಕ್ಸ್, ಸೈಕ್ಲಿಂಗ್, ಪವರ್‌ಲಿಫ್ಟಿಂಗ್ , ರೋಲರ್ ಸ್ಕೇಟಿಂಗ್ ಮತ್ತು ಈಜು ವಿಭಾಗಗಳಲ್ಲಿ ಪದಕ ಸಾಧನೆ ಮಾಡಿತು. ಅದರಲ್ಲಿ 15 ಚಿನ್ನ, 27 ಬೆಳ್ಳಿ ಮತ್ತು 13 ಕಂಚಿನ ಪದಕ ಜಯಿಸಿದರು.
ಸೈಕ್ಲಿಂಗ್‌ನ ಐದು ಕಿ.ಮೀ ರಸ್ತೆ ರೇಸ್‌ನಲ್ಲಿ ನೀಲ್ ಯಾದವ್ ಕಂಚಿನ ಪದಕ ಜಯಿಸಿದರು. ನಂತರ ಯಾದವ್, ಶಿವಾನಿ ಮತ್ತು ಇಂದುಪ್ರಕಾಶ್ ಅವರು 1 ಕಿ.ಮೀ ಟೈಮ್ ಟ್ರಯಲ್ಸ್‌ನಲ್ಲಿ ಚಿನ್ನದ ಪದಕಗಳನ್ನು ಜಯಿಸಿದರು.
ಕಲ್ಪನಾ ಜೇನಾ ಮತ್ತು ಜಯಶೀಲಾ ಅರ್ಬುತರಾಜ್ ಬೆಳ್ಳಿ ಪದಕಗಳನ್ನು ಗೆದ್ದರು.
ಈಜು ಕ್ರೀಡೆಯ ಫ್ರೀಸ್ಟೈಲ್ ವಿಭಾಗದಲ್ಲಿ ದೀಕ್ಷಾ ಜೀತೆಂದ್ರ ಶಿರಗಾಂವ್ಕರ್, ಪೂಜಾ ಗಿರಿಧರರಾವ್ ಗಾಯಕವಾಡ್ ಮತ್ತು ಪ್ರಶದ್ಧಿ ಕಾಂಬ್ಲೆ ಚಿನ್ನದ ಸಾಧನೆ ಮಾಡಿದರು. 25 ಮೀ ಫ್ರೀಸ್ಟೈಲ್‌ನಲ್ಲಿ ಮಾಧವ್ ಮದನ್ ಮತ್ತು ಸಿದ್ಧಾಂತ್ ಮುರಳಿ ಕುಮಾರ್ ಕ್ರಮವಾಗಿ ಚಿನ್ನ ಹಾಗೂ ಕಂಚು ಗಳಿಸಿದರು.
ಇನ್ನುಳಿದಂತೆ ಸೋನೆಪತ್‌ನ ಸಾಕೇತ್ ಕುಂದು ಮಿನಿ ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.