
ಎಫ್‌ಐಎಚ್ ಪ್ರೊ ಹಾಕಿ ಲೀಗ್
ಹೋಬಾರ್ಟ್: ಭಾರತ ಪುರುಷರ ಹಾಕಿ ತಂಡವು ಮಂಗಳವಾರ ಎಫ್‌ಐಎಚ್ ಪ್ರೊ ಲೀಗ್‌ನ ‘ರಿವರ್ಸ್’ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ.
ಒಂಬತ್ತು ತಂಡಗಳ ಟೂರ್ನಿಯಲ್ಲಿ ಭಾರತದ ಈವರೆಗಿನ ಪ್ರದರ್ಶನ ನೀರಸವಾಗಿದೆ. ರೂರ್ಕೆಲಾ ಮತ್ತು ಹೊಬಾರ್ಟ್ ಲೆಗ್‌ಗಳಲ್ಲಿ ಆಡಿದ ಎಲ್ಲಾ ಆರು ಪಂದ್ಯಗಳನ್ನೂ ಸೋತಿದೆ. ಹಾರ್ದಿಕ್ ಸಿಂಗ್ ನಾಯಕತ್ವದ ತಂಡವು ಮೊದಲ ಜಯದ ನಿರೀಕ್ಷೆಯಲ್ಲಿದೆ.
ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಭಾರತದ ವೀರೋಚಿತ ಹೋರಾಟ ಗಮನ ಸೆಳೆದಿತ್ತು. ನಿಗದಿತ ಅವಧಿಯ ಪಂದ್ಯವನ್ನು 2–2 ಡ್ರಾಗೊಂಡ ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ 4–5ರಿಂದ ಮುಗ್ಗರಿಸಿತ್ತು. ಇದಕ್ಕೂ ಮುನ್ನ 0–2ರಿಂದ ಸ್ಪೇನ್‌ಗೆ ಸೋತಿದ್ದ ಹಾರ್ದಿಕ್ ಪಡೆಯು ಮುಯ್ಯಿ ತೋರಿಸಿಕೊಳ್ಳುವ ತವಕದಲ್ಲಿದೆ.
ಆರು ಪಂದ್ಯಗಳಿಂದ ಒಂದು ಅಂಕ ಗಳಿಸಿರುವ ಭಾರತ, ಲೀಗ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಏಳು ಪಂದ್ಯಗಳ ಪೈಕಿ ಒಂದನ್ನು ಗೆದ್ದು, ಆರರಲ್ಲಿ ಸೋತಿರುವ ಸ್ಪೇನ್ ತಂಡವು 3 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 2
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.