ADVERTISEMENT

Asian Games: ಪುರುಷರ 10 ಮೀಟರ್ಸ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2023, 3:03 IST
Last Updated 25 ಸೆಪ್ಟೆಂಬರ್ 2023, 3:03 IST
<div class="paragraphs"><p>ರುದ್ರಂಕ್ಷ್ ಬಿ. ಪಾಟೀಲ, ದಿವ್ಯಾಂಶ್ ಸಿಂಗ್ ಪನ್ವಾರ್, ಐಶ್ವರಿ ಪ್ರತಾಪ್ ಸಿಂಗ್ ತೋಮರ್</p></div>

ರುದ್ರಂಕ್ಷ್ ಬಿ. ಪಾಟೀಲ, ದಿವ್ಯಾಂಶ್ ಸಿಂಗ್ ಪನ್ವಾರ್, ಐಶ್ವರಿ ಪ್ರತಾಪ್ ಸಿಂಗ್ ತೋಮರ್

   

ಹಾಂಗ್‌ಝೌ: ಭಾರತದ ಶೂಟಿಂಗ್ ಪಟುಗಳು ಏಷ್ಯನ್‌ ಕ್ರೀಡಾಕೂಟದ ಎರಡನೇ ದಿನವಾದ ಇಂದು (ಸೋಮವಾರ) ದೇಶಕ್ಕೆ ಮೊದಲ ಚಿನ್ನದ ಕಾಣಿಕೆ ನೀಡಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ 10 ಮೀಟರ್ಸ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತ ತಂಡವು ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.

ADVERTISEMENT

ವಿಶ್ವ ಚಾಂಪಿಯನ್ ರುದ್ರಂಕ್ಷ್ ಬಿ. ಪಾಟೀಲ, ದಿವ್ಯಾಂಶ್ ಸಿಂಗ್ ಪನ್ವಾರ್, ಐಶ್ವರಿ ಪ್ರತಾಪ್ ಸಿಂಗ್ ತೋಮರ್ ತಂಡವು ಫೈನಲ್‌ನಲ್ಲಿ 1893.7 ಅಂಕ ಗಳಿಸಿತು ವಿಶ್ವ ದಾಖಲೆ ನಿರ್ಮಿಸಿತು. ದಕ್ಷಿಣ ಕೊರಿಯಾ 1890.1 ಅಂಕಗಳೊಂದಿಗೆ ಬೆಳ್ಳಿ ಗೆದ್ದರೆ, ಚೀನಾ 1888.2 ಅಂಕಗಳೊಂದಿಗೆ ಕಂಚು ಗೆದ್ದಿತು.

ಭಾರತದ ಪರ ರುದ್ರಂಕ್ಷ್ 632.5, ತೋಮರ್ 631.6 ಮತ್ತು ಪನ್ವಾರ್ 629.6 ಅಂಕಗಳನ್ನು ಗಳಿಸಿ ವಿಶ್ವ ದಾಖಲೆಯ ಅಂಕ ಗಳಿಸಿದರು.

ಭಾನುವಾರ ನಡೆದ ಮಹಿಳೆಯರ ತಂಡ ವಿಭಾಗದಲ್ಲಿ ಅನುಭವಿ ಶೂಟರ್‌ಗಳಾದ ಮೆಹುಲಿ ಘೋಷ್, ರಮಿತಾ ಜಿಂದಾಲ್ ಮತ್ತು ಆಶಿ ಚೌಕ್ಸಿ ಅವರ ಬಳಗವು ಬೆಳ್ಳಿ ಪದಕ ಜಯಿಸಿತ್ತು.

ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ರಮಿತಾ ಜಿಂದಾಲ್ 10 ಮೀಟರ್ಸ್ ರೈಫಲ್‌ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.