ADVERTISEMENT

Tokyo Olympics | ಸೇಲಿಂಗ್‌ನಲ್ಲಿ ಮಿಂಚದ ಭಾರತೀಯ ಸ್ಪರ್ಧಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜುಲೈ 2021, 9:55 IST
Last Updated 29 ಜುಲೈ 2021, 9:55 IST
ಸೇಲಿಂಗ್
ಸೇಲಿಂಗ್    

ಎನೊಶಿಮಾ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪ್ರಭಾವಿ ಎನಿಸಿಕೊಳ್ಳುವಲ್ಲಿ ಭಾರತೀಯ ಸೇಲರ್‌ಗಳು ವಿಫಲರಾಗಿದ್ದಾರೆ.

ಪುರುಷರ ಸ್ಕಿಫ್ 49ಇಆರ್ ಸೇಲಿಂಗ್ ಸ್ಪರ್ಧೆಯಲ್ಲಿ ಭಾರತದ ಗಣಪತಿ ಚೆಂಗಪ್ಪ ಹಾಗೂ ವರುಣ್ ಥಕ್ಕರ್ ಜೋಡಿಯು ಒಟ್ಟಾರೆಯಾಗಿ 17ನೇ ಸ್ಥಾನ ಪಡೆಯಿತು.

ಆರನೇ ರೇಸ್‌ನಲ್ಲಿ 7ನೇ ಸ್ಥಾನ ಪಡೆದರೂ ಒಟ್ಟು 19 ಸ್ಪರ್ಧಿಗಳಿದ್ದ ಸ್ಪರ್ಧೆಯಲ್ಲಿ ಭಾರತ ಜೋಡಿಯು 76 ಅಂಕ ಗಳಿಸಲಷ್ಟೇ ಸಾಧ್ಯವಾಯಿತು.

ಈ ವಿಭಾಗದಲ್ಲಿ ಆರು ರೇಸ್ ಹಾಗೂ ಪದಕ ಸುತ್ತಿನ ಸ್ಪರ್ಧೆಗಳು ಬಾಕಿ ಉಳಿದಿವೆ.

ಅತ್ತ ಲೇಸರ್ ಸ್ಪರ್ಧೆಯಲ್ಲಿ ವಿಷ್ಣು ಸರವಣನ್ 23ನೇ ಸ್ಥಾನ ಪಡೆದರು. ಒಟ್ಟು 35 ಸೇಲರ್‌ಗಳಿದ್ದ ಸ್ಪರ್ಧೆಯಲ್ಲಿ 138 ಅಂಕಗಳನ್ನು ಸಂಪಾದಿಸಿದರು. ಈ ವಿಭಾಗದಲ್ಲಿ ಇನ್ನೆರಡು ರೇಸ್ ಹಾಗೂ ಪದಕ ಸುತ್ತಿನ ಸ್ಪರ್ಧೆ ಬಾಕಿಯಿದೆ.

ನೇತ್ರಾ ಕುಮನನ್ ಅವರಿಗೂ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಮಹಿಳೆಯರ ಲೇಸರ್ ರೇಡಿಯಲ್ ವಿಭಾಗದಲ್ಲಿ 31ನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.