ADVERTISEMENT

ವಿಶ್ವ ಸ್ನೂಕರ್: ಅನುಪಮಾಗೆ ಕಿರೀಟ

ಪಿಟಿಐ
Published 13 ನವೆಂಬರ್ 2025, 22:49 IST
Last Updated 13 ನವೆಂಬರ್ 2025, 22:49 IST
ಅನುಪಮಾ ರಾಮಚಂದ್ರನ್
ಅನುಪಮಾ ರಾಮಚಂದ್ರನ್   

ದೋಹಾ: ಭಾರತದ ಅನುಪಮಾ ರಾಮಚಂದ್ರನ್ ಅವರು ಗುರುವಾರ ನಡೆದ ವಿಶ್ವ ಸ್ನೂಕರ್ ಫೈನಲ್‌ನಲ್ಲಿ ಹಾಂಗ್‌ಕಾಂಗ್‌ನ ಎನ್‌ಜಿ ಆನ್ ಯಿ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಚೆನ್ನೈನ 23 ವರ್ಷದ ಅನುಪಮಾ ಅವರು 3–2 (51-74, 65-41, 10-71, 78-20, 68-60) ಅಂತರದಿಂದ ಆನ್ ಯಿ ಅವರನ್ನು ಮಣಿಸಿ ಐಬಿಎಸ್‌ಎಫ್‌ ವಿಶ್ವ ಸ್ನೂಕರ್ ಕಿರೀಟವನ್ನು ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಕಳೆದ ವರ್ಷ ಏಷ್ಯನ್ ಸ್ನೂಕರ್ ಪ್ರಶಸ್ತಿಯನ್ನು ಗೆದ್ದಿದ್ದ ಅನುಪಮಾ ಇಲ್ಲಿ ಕೊನೆಯ ಹಂತದಲ್ಲಿ ಅದೃಷ್ಟಶಾಲಿಯಾಗಿ ಜಯ ಗಳಿಸಿದರು. ಮೂರು ಬಾರಿ ಚಾಂಪಿಯನ್ ಆನ್ ಯೀ ನಿರ್ಣಾಯಕ ಪಂದ್ಯದಲ್ಲಿ 60-61 ಅಂತರದಿಂದ ಎಡವಿದರು.

ADVERTISEMENT

ಬುಧವಾರ ತಡರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಅನುಪಮಾ 3–1ರಿಂದ ಸ್ವದೇಶದ ಕೀರ್ತನಾ ಪಾಂಡಿಯನ್ ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದಿದ್ದರು. ಆನ್ ಯಿ 3–0ಯಿಂದ ತಮ್ಮದೇ ದೇಶದ ಸೋ ಮನ್ ಯಾನ್ ಅವರನ್ನು ಸೋಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.