
ಬೆಂಗಳೂರು: ಅಹಾನಾ ಮತ್ತು ಧಾರಾ ಅವರ ಆಟದ ನೆರವಿನಿಂದ ಆತಿಥೇಯ ಜೈನ್ ವಿಶ್ವವಿದ್ಯಾಲಯ ತಂಡವು ಮಂಗಳವಾರ ಆರಂಭಗೊಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿತು.
ಕನಕಪುರ ರಸ್ತೆಯಲ್ಲಿರುವ ಜೈನ್ ವಿ.ವಿಯ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಜೈನ್ ತಂಡವು 89–47ರಿಂದ ಡಿಎವಿವಿ ಇಂದೋರ್ ತಂಡವನ್ನು ಮಣಿಸಿತು. ಅಹಾನಾ ಮತ್ತು ಧಾರಾ ಕ್ರಮವಾಗಿ 14 ಮತ್ತು 13 ಅಂಕ ಗಳಿಸಿದರು. ಮಧ್ಯಂತರದ ವೇಳೆ ಕೈನ್ 52–23 ಮುನ್ನಡೆ ಸಾಧಿಸಿತ್ತು.
ಬೆಂಗಳೂರಿನ ಕ್ರೈಸ್ಟ್ ವಿ.ವಿ ತಂಡವು 71–70ರಿಂದ ಎಲ್‌ಎನ್‌ಐಪಿಇ ವಿ.ವಿ ತಂಡವನ್ನು ಮಣಿಸಿತು. ಶೋಮಿರಾ ಬಿದಾಯೆ (26), ಆಧ್ಯಾ ಸ್ವಾಮಿ (11) ಕ್ರೈಸ್ಟ್ ತಂಡದ ಗೆಲುವಿನಲ್ಲಿ ಮಿಂಚಿದರು. ವಿರಾಮದ ವೇಳೆಗೆ ಕ್ರೈಸ್ಟ್ 27–33ರಿಂದ ಹಿನ್ನಡೆಯಲ್ಲಿತ್ತು.
ಫಲಿತಾಂಶಗಳು: ಜೈನ್ ವಿ.ವಿ 89–47ರಿಂದ ಡಿಎವಿವಿ ಇಂದೋರ್ ವಿರುದ್ಧ; ಕ್ರೈಸ್ಟ್ ವಿ.ವಿ 71–70ರಿಂದ ಗ್ವಾಲಿಯರ್‌ನ ಎಲ್‌ಎನ್‌ಐಪಿಇ ವಿ.ವಿ ವಿರುದ್ಧ; ರಾಜಸ್ಥಾನ ವಿ.ವಿ 64–21ರಿಂದ ಎಂಬಿಎಸ್‌ಪಿಎಸ್‌ಯು ಪಟಿಯಾಲ ವಿರುದ್ಧ; ಪಂಜಾಬ್ ವಿ.ವಿ 73–62ರಿಂದ ಉತ್ತರಾಖಂಡದ ಎಲ್‌ಟಿಎಂ ವಿ.ವಿ ವಿರುದ್ಧ; ಚೆನ್ನೈ ಎಸ್‌ಆರ್‌ಎಂ ವಿ.ವಿ 76–55ರಿಂದ ಛತ್ತೀಸಗಢ ಹೇಮಚಂದ್ ವಿ.ವಿ ವಿರುದ್ಧ ಗೆಲುವು ಸಾಧಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.